ಏ.14 ರಂದು ರಾಜ್ಯಕ್ಕೆ ‘ಪ್ರಧಾನಿ ಮೋದಿ’ ಭೇಟಿ ; ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ‘ನಮೋ’ ಘರ್ಜನೆ.!

ಬೆಂಗಳೂರು : ಏ.14 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು, ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ನಮೋ ಘರ್ಜನೆ ಮೊಳಗಲಿದೆ.

ಹೌದು. ಲೋಕಸಭೆ ಚುನಾವಣೆ ಹಿನ್ನೆಲೆ ಏ.14 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು, ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ. ಬೆಂಗಳೂರು , ಚಿಕ್ಕಬಳ್ಳಾಪುರದ ಸಮಾವೇಶ, ರೋಡ್ ಶೋ ಮುಂದೂಡಿಕೆ ಆಗಿದ್ದು, ಚಿಕ್ಕಬಳ್ಳಾಪುರದ ಬದಲಾಗಿ ಮೈಸೂರಿನಲ್ಲಿ ಸಮಾವೇಶ ಆಯೋಜಿಸಲಾಗಿದೆ.

ಸಂಜೆ 5 ಗಂಟೆಗೆ ಮಂಗಳೂರು ತಲುಪಲಿರುವ ಪ್ರಧಾನಿ, ನಾರಾಯಣ ಗುರು ವೃತ್ತದಿಂದ ಹಂಪನಕಟ್ಟೆವರೆಗೆ ಮೆಗಾ ರೋಡ್ ಶೋ ನಡೆಸಲಿದ್ದಾರೆ. ಸುಮಾರು 2.5 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ.ಮೈಸೂರಿನ ಮಹಾರಾಜ ಮೈದಾನದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ ಮೋದಿ ಬಳಿಕ ಸಂಜೆ 6ಕ್ಕೆ ಮಂಗಳೂರಿನಲ್ಲಿ 1.5 ಕಿಮಿ ರೋಡ್ ಶೋ ನಡೆಸಲಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read