HomeKarnatakaBIG NEWS: ಬೆಂಗಳೂರು: ಅಂತರಾಷ್ಟ್ರೀಯ ಮಟ್ಟದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳು ಅರೆಸ್ಟ್

BIG NEWS: ಬೆಂಗಳೂರು: ಅಂತರಾಷ್ಟ್ರೀಯ ಮಟ್ಟದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳು ಅರೆಸ್ಟ್

ಬೆಂಗಳೂರು: ಸಿಲಿಕಾನ್ ಸಿಟಿ ಸಿಸಿಬಿ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಅಂತರಾಷ್ಟ್ರೀಯ ಮಟ್ಟದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಶ್ರೀಲಂಕಾದ ಮೂವರು ಮೋಸ್ಟ್ ವಾಂಟೆಡ್ ಕ್ರಿಮಿನಸ್ ಗಳು ಹಾಗೂ ಅವರಿಗೆ ಆಶ್ರಯ ನೀಡಿದ್ದವರನ್ನು ಬಂಧಿಸಲಾಗಿದೆ. ಶ್ರೀಲಂಕಾದ ಕಾಸಿನ್ ಕುಮಾರ್, ಅಮಿಲಾ ನುವಾನ್, ರಂಗ ಪ್ರಸಾದ್ ಹಾಗೂ ಬೆಂಗಳೂರಿನ ಜೈ ಪರಮೇಶ್ ಅಲಿಯಾಸ್ ಜಾಕ್ ಬಂಧಿತರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾತಕಿ ಕಾಸಿನ್ ಕುಮಾರ್ ವಿರುದ್ಧ ಶ್ರೀಲಂಕಾದಲ್ಲಿ 4 ಕೊಲೆ ಪ್ರಕರಣ, ಅಮಿಲಾ ನುವಾನ್ ಮೇಲೆ 5 ಕೊಲೆ ಪ್ರಕರಣಗಳಿವೆ. ರಂಗ ಪ್ರಸಾದ್ ವಿರುದ್ಧ ಹಲ್ಲೆ ಹಾಗೂ ಕೊಲೆ ಕೇಸ್ ಗಳಿವೆ ಎಂದು ತಿಳಿದುಬಂದಿದೆ.

ಬಂಧಿತರ ಬಳಿ ಇದ್ದ 13 ಮೊಬೈಲ್, ಶ್ರೀಲಂಕಾದ ವಿವಿಧ ವಿಸಿಟಿಂಗ್ ಕಾರ್ಡ್, ಬಸ್ ಟಿಕೆಟ್, ಪೇಪರ್ ಕಟ್ಟಿಂಗ್ಸ್, ರೆಂಟಲ್ ಅಗ್ರಿಮೆಂಟ್ ಪ್ರತಿ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಝೆರಾಕ್ಸ್ ಗಳನ್ನು ವಶಕ್ಕೆ ಪಡೆಯಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular