ಅಬುಧಾಬಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸ್ವಾಗತಿಸಿದರು.
ಉಭಯ ನಾಯಕರು ಪರಸ್ಪರ ತಬ್ಬಿಕೊಂಡಿದ್ದು, ಇದಕ್ಕೂ ಮುನ್ನ ಪ್ರಧಾನಿಯವರು ಆಗಮಿಸಿದಾಗ ಗಾರ್ಡ್ ಆಫ್ ಹಾನರ್ ಸ್ವೀಕರಿಸಿದರು. ಪ್ರಧಾನಿ ಮೋದಿ ಎರಡು ದಿನಗಳ ಗಲ್ಫ್ ರಾಷ್ಟ್ರ ಪ್ರವಾಸದಲ್ಲಿದ್ದಾರೆ. ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದುವರಿಸಲು ಮತ್ತು ಮೊದಲ ಹಿಂದೂ ಕಲ್ಲಿನ ದೇವಾಲಯವನ್ನು ಉದ್ಘಾಟಿಸಲು ಅವರು ಗಲ್ಫ್ ರಾಷ್ಟ್ರದ ಉನ್ನತ ನಾಯಕರೊಂದಿಗೆ ವ್ಯಾಪಕ ಮಾತುಕತೆ ನಡೆಸಲಿದ್ದಾರೆ. 2015ರ ಬಳಿಕ ಪ್ರಧಾನಿ ಮೋದಿ ಯುಎಇಗೆ ನೀಡುತ್ತಿರುವ ಏಳನೇ ಭೇಟಿ ಇದಾಗಿದೆ.
https://twitter.com/PTI_News/status/1757360124375552472?ref_src=twsrc%5Etfw%7Ctwcamp%5Etweetembed%7Ctwterm%5E1757360124375552472%7Ctwgr%5E226448ac8c7b8b25794ba770dc1bfb1631499d8d%7Ctwcon%5Es1_&ref_url=https%3A%2F%2Fwww.hindustantimes.com%2Findia-news%2Fpm-modi-uae-visit-gets-warm-welcome-by-uaes-mohammed-bin-zayed-al-nahyan-in-abu-dhabi-101707822751911.html