HomeLatest Newsಕ್ಯಾನ್ಸರ್ ತಜ್ಞರ ಎಚ್ಚರಿಕೆ: ಪ್ರೆಶರ್ ಕುಕ್ಕರ್‌ನ ಈ ಭಾಗ ಕ್ಲೀನ್ ಮಾಡಲು ಮರೆಯದಿರಿ

ಕ್ಯಾನ್ಸರ್ ತಜ್ಞರ ಎಚ್ಚರಿಕೆ: ಪ್ರೆಶರ್ ಕುಕ್ಕರ್‌ನ ಈ ಭಾಗ ಕ್ಲೀನ್ ಮಾಡಲು ಮರೆಯದಿರಿ

ನಾವು ಪ್ರತಿದಿನ ಅಡುಗೆಗೆ ಪ್ರೆಶರ್ ಕುಕ್ಕರ್ ಬಳಸುತ್ತೇವೆ ಹಾಗೂ ಅಡುಗೆ ಮುಗಿದ ತಕ್ಷಣ ಅದನ್ನು ತೊಳೆದು ಎತ್ತಿಡುತ್ತೇವೆ. ಆದರೆ ಕುಕ್ಕರ್ ಮುಚ್ಚಳದಲ್ಲಿರುವ ರಬ್ಬರ್ ಗ್ಯಾಸ್ಕೆಟ್ (Sealing Ring) ಅನ್ನು ಎಷ್ಟು ಬಾರಿ ಬಿಡಿಸಿ ಸ್ವಚ್ಛಗೊಳಿಸುತ್ತೇವೆ? ಹೆಚ್ಚಿನವರು ಈ ಭಾಗವನ್ನು ನಿರ್ಲಕ್ಷಿಸುತ್ತಾರೆ. ಆದರೆ ಈ ಸಣ್ಣ ರಬ್ಬರ್ ರಿಂಗ್ ನಿಮ್ಮ ಜೀರ್ಣಕ್ರಿಯೆ ಹಾಗೂ ರೋಗನಿರೋಧಕ ಶಕ್ತಿಯ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಗ್ಯಾಸ್ಕೆಟ್‌ನಲ್ಲಿ ಬ್ಯಾಕ್ಟೀರಿಯಾ ಬೆಳೆಯುವುದು ಹೇಗೆ?

ಅಡುಗೆ ಮಾಡುವಾಗ ಹಬೆಯ ಜೊತೆಗೆ ಆಹಾರದ ಕಣಗಳು, ಎಣ್ಣೆಯ ಜಿಡ್ಡು ಮತ್ತು ತೇವಾಂಶವು ಗ್ಯಾಸ್ಕೆಟ್‌ನ ಒಳಭಾಗದಲ್ಲಿ ಸಿಲುಕಿಕೊಳ್ಳುತ್ತವೆ. ಇದನ್ನು ಸರಿಯಾಗಿ ಶುಚಿಗೊಳಿಸದಿದ್ದರೆ, ಅಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು (Mould) ಉತ್ಪತ್ತಿಯಾಗುತ್ತವೆ.

ಕ್ಯಾನ್ಸರ್ ತಜ್ಞ ಡಾ. ತರಂಗ್ ಕೃಷ್ಣ ಹಾಗೂ ಆಯುರ್ವೇದ ಪೌಷ್ಟಿಕತಜ್ಞೆ ಶ್ವೇತಾ ಶಾ ಅವರ ಪ್ರಕಾರ, ಈ ಗ್ಯಾಸ್ಕೆಟ್‌ನಲ್ಲಿ ಅಡಗಿರುವ ಬ್ಯಾಕ್ಟೀರಿಯಾಗಳು ಆಹಾರವನ್ನು ಕಲುಷಿತಗೊಳಿಸುತ್ತವೆ. ಇದರಿಂದ ವಾಂತಿ, ಭೇದಿ, ಹೊಟ್ಟೆ ಉಬ್ಬರ ಹಾಗೂ ಅಜೀರ್ಣದಂತಹ ಸಮಸ್ಯೆಗಳು ಎದುರಾಗಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ಯಾಸ್ಕೆಟ್ ಸ್ವಚ್ಛಗೊಳಿಸುವ ಸರಿಯಾದ ಕ್ರಮ

ಪ್ರತಿ ಬಳಕೆಯ ನಂತರ ತೊಳೆಯಿರಿ: ಕುಕ್ಕರ್ ಮುಚ್ಚಳದಿಂದ ಗ್ಯಾಸ್ಕೆಟ್ ಅನ್ನು ಹೊರತೆಗೆದು, ಬೆಚ್ಚಗಿನ ನೀರು ಮತ್ತು ಸೌಮ್ಯವಾದ ಸಾಬೂನು ಬಳಸಿ ತೊಳೆಯಿರಿ.

ಸಂಪೂರ್ಣವಾಗಿ ಒಣಗಿಸಿ: ಒದ್ದೆಯಿರುವ ಗ್ಯಾಸ್ಕೆಟ್ ಅನ್ನು ಮುಚ್ಚಳಕ್ಕೆ ಹಾಕಬೇಡಿ. ಅದು ಸಂಪೂರ್ಣವಾಗಿ ಒಣಗಿದ ನಂತರವೇ ಬಳಸಿ.

ವಾರಕ್ಕೊಮ್ಮೆ ಡೀಪ್ ಕ್ಲೀನ್: ವಾರಕ್ಕೊಮ್ಮೆ ಗ್ಯಾಸ್ಕೆಟ್ ಅನ್ನು ಪರೀಕ್ಷಿಸಿ, ಎಣ್ಣೆಯ ಜಿಡ್ಡು ಸಂಪೂರ್ಣವಾಗಿ ಹೋಗುವಂತೆ ಸ್ವಚ್ಛಗೊಳಿಸಿ.

ಮುಚ್ಚಳ ಲಾಕ್ ಮಾಡಿ ಇಡಬೇಡಿ: ಕುಕ್ಕರ್ ಬಳಸದಿದ್ದಾಗ ಮುಚ್ಚಳವನ್ನು ಗಟ್ಟಿಯಾಗಿ ಲಾಕ್ ಮಾಡಿಡಬೇಡಿ. ಸ್ವಲ್ಪ ತೆರೆದಿಡುವುದರಿಂದ ಒಳಗಿನ ತೇವಾಂಶ ಆವಿಯಾಗಿ ಬ್ಯಾಕ್ಟೀರಿಯಾ ತಡೆಯಬಹುದು.

ಬಾಳಿಕೆ ಹೆಚ್ಚಿಸಲು ಮತ್ತು ಸುರಕ್ಷತೆಗೆ ಸಲಹೆಗಳು

ಮೃದುವಾಗಿಡಲು ಎಣ್ಣೆ ಸವರಿ: ಗ್ಯಾಸ್ಕೆಟ್ ಬೇಗನೆ ಬಿರುಕು ಬಿಡಬಾರದು ಎಂದರೆ, ತೊಳೆದ ನಂತರ ಅದಕ್ಕೆ ಸ್ವಲ್ಪ ಅಡುಗೆ ಎಣ್ಣೆಯನ್ನು ಸವರಿ ಇಡಿ.

ಯಾವಾಗ ಬದಲಾಯಿಸಬೇಕು?: ಬಳಕೆಯ ಆಧಾರದ ಮೇಲೆ ೧೨ ರಿಂದ ೧೮ ತಿಂಗಳಿಗೊಮ್ಮೆ ಗ್ಯಾಸ್ಕೆಟ್ ಬದಲಾಯಿಸವುದು ಸೂಕ್ತ. ರಬ್ಬರ್ ಸಡಿಲವಾದರೆ, ಬಿರುಕು ಬಿಟ್ಟರೆ ಅಥವಾ ಜಿಗುಟಾದಂತೆ ಭಾಸವಾದರೆ ತಕ್ಷಣ ಬದಲಿಸಿ.

ನೆನಪಿಡಿ: ಹಾಳಾದ ಅಥವಾ ಸಡಿಲವಾದ ಗ್ಯಾಸ್ಕೆಟ್ ಬಳಸುವುದು ಪ್ರೆಶರ್ ಕುಕ್ಕರ್ ಸ್ಫೋಟಕ್ಕೂ ಕಾರಣವಾಗಬಹುದು. ಹೀಗಾಗಿ ಆರೋಗ್ಯ ಮತ್ತು ಸುರಕ್ಷತೆ ಎರಡರ ದೃಷ್ಟಿಯಿಂದಲೂ ಗ್ಯಾಸ್ಕೆಟ್ ಸ್ವಚ್ಛತೆ ಅತ್ಯಗತ್ಯ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular