HomeKarnatakaBIG NEWS: ಸಚಿವ ಆರ್.ಬಿ.ತಿಮ್ಮಾಪುರ ಹೇಳಿಕೆಗೆ ಪ್ರೀತಂ ಗೌಡ ಟಾಂಗ್

BIG NEWS: ಸಚಿವ ಆರ್.ಬಿ.ತಿಮ್ಮಾಪುರ ಹೇಳಿಕೆಗೆ ಪ್ರೀತಂ ಗೌಡ ಟಾಂಗ್

ಹಾಸನ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಆದ ಗತಿಯೇ ವಿಜಯೇಂದ್ರಗೂ ಆಗಲಿದೆ ಎಂಬ ಸಚಿವ ಆರ್.ಬಿ.ತಿಮ್ಮಾಪುರ ಹೇಳಿಕೆಗೆ ಕಿಡಿಕಾರಿರುವ ಮಾಜಿ ಶಾಸಕ ಪ್ರೀತಂ ಗೌಡ, ಹರಕೆಯ ಕುರಿ ಯಾರು ಎಂಬುದು ಮುಂದೆ ಗೊತ್ತಾಗುತ್ತೆ ಎಂದಿದ್ದಾರೆ.

ಹಾಸನದಲ್ಲಿ ಮಾತನಾಡಿದ ಪ್ರೀತಂ ಗೌಡ, ಯಡಿಯೂರಪ್ಪನವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ವಿಜಯೇಂದ್ರ ಕೂಡ ನಾಲ್ಕು ಬಾರಿ ಮುಖ್ಯಂತ್ರಿಯಾಗುತ್ತಾರೆ. ಅಶ್ವಮೇಧ ಯಾಗದ ಕುದುರೆ ಕಟ್ಟಲಾಗಿದೆ. ಹರಕೆಯ ಕುರಿ ಯಾರು ಎನ್ನುವುದು ಮುಂದೆ ಗೊತ್ತಾಗಲಿದೆ ಎಂದು ಟಾಂಗ್ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಜಯೇಂದ್ರ ಶಕ್ತಿ, ತಂತ್ರಗಾರಿಕೆ ಏನು ಎಂಬುದು ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಲಿದೆ. ಕಾಲಕ್ರಮೇಣ ಎಲ್ಲವೂ ಸರಿಹೋಗಲಿದೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular