HomeKarnatakaBIG NEWS: ಅಮಾನತುಗೊಂಡಿರುವ ಅಧಿಕಾರಿಗಳಿಂದಲೇ ವಿಕ್ರಂ ಸಿಂಹ ವಿಚಾರಣೆ; ಅನುಮಾನಕ್ಕೆ ಕಾರಣವಾದ ಅರಣ್ಯ ಇಲಾಖೆ ನಡೆ

BIG NEWS: ಅಮಾನತುಗೊಂಡಿರುವ ಅಧಿಕಾರಿಗಳಿಂದಲೇ ವಿಕ್ರಂ ಸಿಂಹ ವಿಚಾರಣೆ; ಅನುಮಾನಕ್ಕೆ ಕಾರಣವಾದ ಅರಣ್ಯ ಇಲಾಖೆ ನಡೆ

ಹಾಸನ: ಮರಗಳ ಮಾರಣಹೋಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಕೇಸ್ ನಲ್ಲಿ ಅಮಾನತುಗೊಂಡಿರುವ ಅಧಿಕಾರಿಗಳಿಂದಲೇ ವಿಕ್ರಂ ಸಿಂಹ್ ಅವರ ವಿಚಾರಣೆ ನಡೆಯುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಅಕ್ರಮವಾಗಿ ಮರಗಳನ್ನು ಕಡಿದ ಪ್ರಕರಣ ಸಂಬಂಧ ನಿರ್ಲಕ್ಷ್ಯ ಆರೋಪದಲ್ಲಿ ಅಮಾನತುಗೊಂಡಿದ್ದ ಎಸಿ ಎಫ್ ಪ್ರಭುಗೌಡ ಬಿರಾದಾರ್ ಹಾಗೂ ಆರ್ ಎಫ್ ಒ ವಿನಯ್ ಕುಮಾರ್ ನೇತೃತ್ವದ ತಂಡದಿಂದಲೇ ವಿಕ್ರಂ ಸಿಂಹ ವಿಚಾರಣೆ ನಡೆಯುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಮಾನತುಗೊಂಡಿದ್ದ ಅಧಿಕಾರಿಗಳಿಂದಲೇ ಅದೇ ಪ್ರಕರಣದ ಆರೋಪಿಯ ತನಿಖೆ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಾಸನದ ಗೆಂಡೆಕಟ್ಟೆ ಅರಣ್ಯ ಪ್ರದೇಶದಲ್ಲಿ ಆರೋಪಿ ವಿಚಾರಣೆ ನಡೆಸಲಾಗುತ್ತಿದೆ.

 

For Latest News Updates, Join Our Whatsapp Community🚩
RELATED ARTICLES

Most Popular