ಮೈಸೂರು: ನ್ಯಾಯಯುತವಾಗಿ ಮುಖ್ಯಮಮ್ತ್ರಿ ಸ್ಥಾನ ಡಿ.ಕೆ.ಶಿವಕುಮಾರ್ ಅವರಿಗೆ ಸಿಗಬೇಕಿತ್ತು. ರಾಅಹುಲ್ ಗಾಂಧಿ, ಸೋನಿಯಾ ಗಾಅಂಧಿ ಬಲಹೀನರಾಗಿದ್ದು, ಎಲ್ಲರಿಗೂ ಹೆದರುವ ಹೈಕಮಾಂಡ್ ಆಗಿದೆ. ಅದಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಸಿದ್ದರಾಮಯ್ಯನವರು ಡಿ.ಕೆ.ಶಿವಕುಮಾರ್ ಅವರಿಗೆ ಸೀಟು ಬಿಟ್ಟುಕೊಡ್ತಾರೆ ಅನಿಸುತ್ತಿಲ್ಲ. ದೇವೇಗೌಡರ ಗರಡಿದ ಸಿದ್ದರಾಮಯ್ಯನವರು ಅಭಿವೃದ್ಧಿ ಕೆಲಸ ಕಲಿತಿದ್ದರೆ ರಾಜ್ಯಕ್ಕೆ ಒಳ್ಳೆಯದಾಗುತ್ತಿತ್ತು. ಆದರೆ ಬರೀ ಪಾಲಿಟಿಕ್ಸ್ ಕಲಿತಿದ್ದಾರೆ. ಎರಡೂವರೆ ವರ್ಷ ಒಳ್ಳೆಯ ಕೆಲಸ ಮಾಡಿದ್ದರೆ ಸಿದ್ದರಾಮಯ್ಯನವರೇ ಮುಂದುವರೆಯಲಿ ಎಂದು ಜನರೇ ಧ್ವನಿ ಎತ್ತುತ್ತಿದ್ದರು. ಕೆಟ್ಟ ಆಡಳಿತ ನೀಡಿದರೂ ಸಿದ್ದರಾಮಯ್ಯನವರಿಗೆ ಸೀಟು ಬಿಟ್ಟುಕೊಡುವ ಮನಸ್ಸಿಲ್ಲ ಎಂದು ಹೇಳಿದರು.
ನವೆಂಬರ್ ಕ್ರಾಂತಿ ಡಿಸೆಂಬರ್ ನಲ್ಲಿ ಬ್ರಾಂತಿ ಆಗುತ್ತದೆ. ಸತೀಶ್ ಜಾರಕಿಹೊಳಿ ಅವರನ್ನು ಎತ್ತಿಕಟ್ಟುವುದು, ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸವಾಗುತ್ತದೆ ಎಂದರು. ನಾವು ರೈತರ ಪರ ಧ್ವನಿ ಎತ್ತಿ ಸರ್ಕಾರವನ್ನುಎಚ್ಚರಗೊಳಿಸುವ ಕೆಲಸ ಮಾಡುತ್ತೇವೆ. ರಾಜ್ಯಾದ್ಯಣ್ತ ವಿಜಯೇಂದ್ರ, ಆರ್.ಅಶೋಕ್ ನೇತೃತ್ವದಲ್ಲಿ ಹೋರಾಟ ನಡೆಯಲಿದೆ ಎಂದರು.
