HomeKarnatakaBIG NEWS: ಫ್ಯಾಶನ್ ಡಿಸೈನರ್ ಪ್ರಸಾದ್ ಬಿಡ್ಡಪ್ಪ ಪುತ್ರನ ಪುಂಡಾಟ; ಪೊಲೀಸರೊಂದಿಗೂ ದುರ್ವರ್ತನೆ

BIG NEWS: ಫ್ಯಾಶನ್ ಡಿಸೈನರ್ ಪ್ರಸಾದ್ ಬಿಡ್ಡಪ್ಪ ಪುತ್ರನ ಪುಂಡಾಟ; ಪೊಲೀಸರೊಂದಿಗೂ ದುರ್ವರ್ತನೆ

ಬೆಂಗಳೂರು: ಖ್ಯಾತ ಫ್ಯಾಶನ್ ಡಿಸೈನರ್ ಪ್ರಸಾದ್ ಬಿಡ್ಡಪ್ಪ ಪುತ್ರ, ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಸಹೋದರನ ಪುಂಡಾಟಕ್ಕೆ ಪೊಲೀಸರೇ ಸುಸ್ತಾಗಿದ್ದಾರೆ.

ಪ್ರಸಾದ್ ಬಿಡ್ಡಪ್ಪ ಪುತ್ರ ಆಡಂ ಮದ್ಯ ಸೇವಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದಲ್ಲದೇ ಬೇರೊಬ್ಬರ ಕಾರಿಗೂ ಡಿಕ್ಕಿ ಹೊಡೆದು ಗಲಾಟೆ ಮಾಡಿದ್ದಾರೆ. ಆತನನ್ನು ನಿಯಂತ್ರಿಸಲು ಬಂದ ಪೊಲೀಸರೊಂದಿಗೂ ದುರ್ವರ್ತನೆ ತೋರಿದ್ದಾರೆ. ಅಕ್ಟೋಬರ್ 25ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಲಹಂಕ ನ್ಯೂಟೌನ್ ವ್ಯಾಪ್ತಿಯಲ್ಲಿ ತಡ ರಾತ್ರಿ ಈ ಘಟನೆ ನಡೆದಿದೆ. ರೈಲ್ ವ್ಹೀಲ್ ಫ್ಯಾಕ್ಟರಿ ಬಳಿ ಆಡಂ, ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದಾರೆ. ಹಿಂದಿನಿಂದ ಬಂದ ವಾಹನ ಸವಾರನಿಗೆ ಜಾಗ ಬಿಟ್ಟಿಲ್ಲ. ಹಾರ್ನ್ ಮಾಡಿದ್ದಕ್ಕೆ ಕಾರನ್ನು ಅಡ್ಡಗಟ್ಟಿ ವಾಹನ ಸವಾರನಿಗೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ವಾಹನ ಸವಾರ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಆಡಂ. ಆತನ ಹುಚ್ಚಾಟ ನಿಲ್ಲಿಸಲು ಹೋದ ಪೊಲೀಸರ ಜೊತೆಯೂ ದುರ್ವರ್ತನೆ ತೋರಿದ್ದಾರೆ. ವಾಹನ ಸವಾರನ ದೂರಿನ ಮೇರೆಗೆ ಆಡಂ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಆಡಂ ನನ್ನು ಬಂಧಿಸಿದ್ದಾರೆ. ಆದರೆ ಸ್ಟೇಷನ್ ಬೇಲ್ ಮೇಲೆ ಬಿಡುಗಡೆಯಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular