HomeKarnatakaಮಸಾಜ್ ಪಾರ್ಲರ್ ಕೇಸ್ ನಲ್ಲಿ ಅರೆಸ್ಟ್ ಆದ ಪ್ರಸಾದ್ ಅತ್ತಾವರ ಮೊಬೈಲ್ ನಲ್ಲಿ ಸ್ಫೋಟಕ ಅಂಶ...

ಮಸಾಜ್ ಪಾರ್ಲರ್ ಕೇಸ್ ನಲ್ಲಿ ಅರೆಸ್ಟ್ ಆದ ಪ್ರಸಾದ್ ಅತ್ತಾವರ ಮೊಬೈಲ್ ನಲ್ಲಿ ಸ್ಫೋಟಕ ಅಂಶ ಪತ್ತೆ: ಸ್ನೇಹಮಯಿ ಕೃಷ್ಣ, ಗಂಗರಾಜು ಫೋಟೋ ಇಟ್ಟು ರಕ್ತಾಭಿಷೇಕ

ಮಂಗಳೂರು: ವಾರದ ಹಿಂದಷ್ಟೇ ಮಂಗಳೂರಿನ ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿದ ಕೇಸ್ ನಲ್ಲಿ ಬಂಧಿಸಲ್ಪಟ್ಟಿದ್ದ ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಮೊಬೈಲ್ ನಲ್ಲಿ ಸ್ಫೋಟಕ ಅಂಶ ಪತ್ತೆಯಾಗಿದೆ. ದೇವರ ಮುಂದೆ ಪ್ರಾಣಿಬಲಿ ಕೊಟ್ಟು ಮುಡಾ ಹಗರಣದ ದೂರುದಾರರಾಗಿರುವ ಸ್ನೇಹಮಯಿ ಕೃಷ್ಣ, ಗಂಗರಾಜು ಫೋಟೋ ಇಟ್ಟು ರಕ್ತಾಭಿಷೇಕ ಮಾಡಿರುವ ವಿಡಿಯೋ ಪತ್ತೆಯಾಗಿದೆ.

ತನಿಖೆ ನಡೆಸುತ್ತಿದ್ದ ಮಂಗಳೂರು ಪೊಲೀಸರು ಪ್ರಸಾದ್ ಅತ್ತಾವರ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಈ ವಿಡಿಯೋ ಪತ್ತೆಯಾಗಿದೆ. 5 ಕುರಿಗಳನ್ನು ಬಲಿಕೊಟ್ಟು ಮುಡಾ ದೂರುದಾರರಾಗಿರುವ ಸ್ನೇಹಮಯಿ ಕೃಷ್ಣ, ಗಂಗರಾಜುಗೆ ಶಕ್ತಿ ತುಂಬಲು ಅವರ ಫೋಟೋ ಇಟ್ಟು ರಕ್ತಾಭಿಷೇಕ ಮಾಡಿದ್ದಾರೆ. ಈ ಘಟನೆ ಸಂಬಂಧ ಪ್ರಸಾದ್ ಅತ್ತಾವರ ಹಾಗೂ ಅನಂತ್ ಭಟ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಈ ಬಗ್ಗೆ ದಕ್ಷಿಣ ಕನ್ನಡ ಪೊಲೀಸರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವರ ಗಮನಕ್ಕೆ ತಂದಿದ್ದು, ಬಳಿಕ ಕದ್ರಿ ಇನ್ಸ್ ಪೆಕ್ಟರ್ ಸೋಮಶೇಖರ್ ದೂರಿನ ಮೇರೆಗೆ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಾಣಿಬಲಿ ಪೂಜೆಗೆ ಪ್ರಸಾದ್ ಅತ್ತಾವರ, ಅನಂತ್ ಭಟ್ ಎಂಬುವವರಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಮತ್ತೊಂದು ಕೇಸ್ ಕೂಡ ದಾಖಲಾಗಿದೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular