HomeEntertainmentನಾಳೆ ತೆರೆ ಮೇಲೆ ಬರಲಿದೆ 'ಪ್ರಣಯಂ'

ನಾಳೆ ತೆರೆ ಮೇಲೆ ಬರಲಿದೆ ‘ಪ್ರಣಯಂ’

ನಾಳೆ ಸಾಲು ಸಾಲು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಸಿಗುತ್ತಿದೆ. ರಾಜವರ್ಧನ್ ಅಭಿನಯದ ‘ಪ್ರಣಯಂ’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ದತ್ತಾತ್ರೆಯ ನಿರ್ದೇಶನದ ಈ ಚಿತ್ರದಲ್ಲಿ ರಾಜವರ್ಧನ್ ಮತ್ತು ನೈನಾ ಗಂಗೂಲಿ  ಮುಖ್ಯ ಮುಖ್ಯ ಭೂಮಿಕೆಯಲ್ಲಿದ್ದು, ಪ್ರಶಾಂತ್, ಮಂಥನ, ಗೋವಿಂದೇಗೌಡ, ಪ್ರಿಯಾ ತರುಣ್ ಮತ್ತು ಸಮೀಕ್ಷಾ ಬಣ್ಣ ಹಚ್ಚಿದ್ದಾರೆ.

ಮಾನ್ಸಿ ವೆಂಚರ್ಸ್ ಬ್ಯಾನರ್ ನಲ್ಲಿ ಪರಮೇಶ್ ನಿರ್ಮಾಣ ಮಾಡಿದ್ದು, ಖ್ಯಾತ ಹಿರಿಯ ಸಂಗೀತ ನಿರ್ದೇಶಕ ಮನೋಮೂರ್ತಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ವಿ ನಾಗೇಂದ್ರ ಆಚಾರ್ಯ ಛಾಯಾಗ್ರಹಣ, ಮದನ್ ಹರಿಣಿ ನೃತ್ಯ ನಿರ್ದೇಶನ, ಜಯಂತ್ ಕಾಯ್ಕಿಣಿ ಅವರ ಸಾಹಿತ್ಯವಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಲವ್ ಸ್ಟೋರಿ ಕಥಾಧಾರಿತ  ಸಿನಿಮಾ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular