HomeKarnatakaBIG NEWS: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್; ದೆವರಾಜೇಗೌಡ, ಕಾರ್ತಿಕ್ ಗೆ ಎದುರಾಯ್ತು ಸಂಕಷ್ಟ;...

BIG NEWS: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್; ದೆವರಾಜೇಗೌಡ, ಕಾರ್ತಿಕ್ ಗೆ ಎದುರಾಯ್ತು ಸಂಕಷ್ಟ; SITಯಿಂದ ನೋಟಿಸ್

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ಚುರುಕುಗೊಳಿಸಿದ್ದು, ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಹಾಗೂ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಗೌಡಗೆ ನೋಟಿಸ್ ಜಾರಿ ಮಾಡಿದೆ.

ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಇಬ್ಬರಿಗೂ ನೋಟೀಸ್ ನೀಡಿದೆ. ದೇವರಾಜೇಗೌಡ ಕೆಲ ದಿನಗಳ ಹಿಂದೆ ಕೆಲ ದಾಖಲೆಗಳನ್ನು, ಆಡೀಯೋಗಳನ್ನು ಬಿಡುಗಡೆ
ಮಾಡಿದ್ದರು. ಅಲ್ಲದೇ ಡಿಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಎಸ್ಐಟಿ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

ಇನ್ನು ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಗೌಡಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀದಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಜ್ವಲ್ ರೇವಣ್ಣ ಪ್ರಕರಣ,ದೇವರಾಜೇಗೌಡ,ಕಾರ್ತಿಕ್ ಗೌಡ,ಎಸ್ ಐಟಿ,ನೋಟಿಸ್,Prajwal revanna,devarajegowda,kartik gowda,Notice

For Latest News Updates, Join Our Whatsapp Community🚩
RELATED ARTICLES

Most Popular