HomeKarnatakaಮೆಜೆಸ್ಟಿಕ್‌, ಲಾಲ್‌ಬಾಗ್‌, ಚಿಕ್ಕಪೇಟೆಯೂ ವಕ್ಫ್ ಆಸ್ತಿ; ನಾಳೆ ವಿಧಾನಸೌಧವೂ ತಮ್ಮದೆಂದರೆ ಅಚ್ಚರಿ ಇಲ್ಲ: ಪ್ರಹ್ಲಾದ್ ಜೋಶಿ...

ಮೆಜೆಸ್ಟಿಕ್‌, ಲಾಲ್‌ಬಾಗ್‌, ಚಿಕ್ಕಪೇಟೆಯೂ ವಕ್ಫ್ ಆಸ್ತಿ; ನಾಳೆ ವಿಧಾನಸೌಧವೂ ತಮ್ಮದೆಂದರೆ ಅಚ್ಚರಿ ಇಲ್ಲ: ಪ್ರಹ್ಲಾದ್ ಜೋಶಿ ವಾಗ್ದಾಳಿ

ಹಾವೇರಿ: ತುಷ್ಟೀಕರಣದ ಪಿತಾಮಹ ಭ್ರಷ್ಟ ಸಿದ್ದರಾಮಯ್ಯ ಅವರ ಕೃಪಾಕಟಾಕ್ಷದಿಂದಾಗಿ ಇಂದು ವಕ್ಫ್‌ ಅತಿರೇಕದ ಉತ್ತುಂಗಕ್ಕೆ ಏರಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ಬೆಂಗಳೂರಿನ ಮೆಜೆಸ್ಟಿಕ್‌, ಲಾಲ್‌ಬಾಗ್‌, ಅವೆನ್ಯೂ ರೋಡ್‌, ಚಿಕ್ಕಪೇಟೆ ಸೇರಿದಂತೆ ಹಲವು ಪ್ರದೇಶಗಳನ್ನು ವಕ್ಫ್ ತನ್ನದೆಂದು ಘೋಷಿಸಲು ಆರಂಭಿಸಿದೆ. ಕೆಂಪೇಗೌಡರು ಕಟ್ಟಿ ಬೆಳೆಸಿದ ಬೆಂದಕಾಳೂರು ವಕ್ಫ್‌ ಲ್ಯಾಂಡ್‌ ಜಿಹಾದ್‌ನ ಕಪಿಮುಷ್ಠಿಯಲ್ಲಿ ಸಿಲುಕಿ ಬೇಯುತ್ತಿದೆ ಎಂದು ಕಿಡಿಕಾರಿದ್ದಾರೆ.

ವಕ್ಫ್ ಮೂಲಕ ರಾಜ್ಯ ಸರ್ಕಾರ 9 ಲಕ್ಷ ಎಕರೆ ಜಮೀನು ಕಬಳಿಸಲು ಹೊರಟಿದೆ. ಬೆಂಗಳೂರಿನ ಮೆಜೆಸ್ಟಿಕ್, 175 ಎಕರೆ ಇದೆ. ಇದು ಸಹ ವಕ್ಫ್ ಆಸ್ತಿ ಎಂದು ಹೇಳುತ್ತಿದ್ದಾರೆ. ನಾಳೆ ವಿಧಾನಸೌಧವೂ ವಕ್ಫ್ ಆಸ್ತಿ ಎಂದು ಹೇಳಿದರೆ ಆಶ್ಚರ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular