HomeKarnatakaಬಿಜೆಪಿಗೆ ಪ್ರಚಂಡ ಬಹುಮತ: ಸಮೀಕ್ಷೆಯನ್ನೂ ಮೀರಿ ಐತಿಹಾಸಿಕ ಗೆಲುವು ದಾಖಲಿಸುವುದು ನಿಶ್ಚಿತ: ಪ್ರಹ್ಲಾದ್ ಜೋಶಿ ವಿಶ್ವಾಸ

ಬಿಜೆಪಿಗೆ ಪ್ರಚಂಡ ಬಹುಮತ: ಸಮೀಕ್ಷೆಯನ್ನೂ ಮೀರಿ ಐತಿಹಾಸಿಕ ಗೆಲುವು ದಾಖಲಿಸುವುದು ನಿಶ್ಚಿತ: ಪ್ರಹ್ಲಾದ್ ಜೋಶಿ ವಿಶ್ವಾಸ

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿಗೆ ಪ್ರಚಂಡ ಬಹುಮತ ಲಭಿಸಲಿದೆ ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಪ್ರಹ್ಲಾದ್ ಜೋಶಿ, ಚುನಾವಣೋತ್ತರ ಎಲ್ಲಾ ಸಮೀಕ್ಷೆಗಳನ್ನೂ ಮೀರಿ ಬಿಜೆಪಿ ಗೆಲುವು ಸಾಧಿಸಲಿದೆ. 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸಲಿದೆ. ಬಿಜೆಪಿ ಯಾವತ್ತೂ ಇದ್ದನ್ನೇ ಹೇಳುತ್ತಾ ಬಂದಿದೆ. ಆದರೂ ಕೆಲವರು ಸಂಶಯ ವ್ಯಕ್ತಪಡಿಸಿದ್ದರು. ಈಗ ಎಕ್ಸಿಟ್ ಪೋಲ್ ನಲ್ಲಿಯೂ ಎನ್ ಡಿಎಗೆ ಐತಿಹಾಸಿಕ ಗೆಲುವು ಎಂದು ಹೇಳಲಾಗುತ್ತಿದೆ. ಮೋದಿ, ಅಮಿತ್ ಶಾ ನೇತೃತ್ವದಲ್ಲಿ ಎನ್ ಡಿಎ ಪ್ರಚಂಡ ಬಹುಮತ ಪಡೆಯಲಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕದಲ್ಲಿಯೂ ಬಿಜೆಪಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ ವಾಸ್ತವವನ್ನು ಮರೆ ಮಾಚಲು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

 

For Latest News Updates, Join Our Whatsapp Community🚩
RELATED ARTICLES

Most Popular