ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸೋಲಿಗೆ ಇವಿಎಂ ದೋಷ ಎಂದ ಗೃಹ ಸಚಿವ ಪರಮೇಶ್ವರ್: ರಾಹುಲ್ ಗಾಂಧಿ ರೀತಿ ಮಾತನಾಡಬೇಡಿ ಎಂದು ತಿರುಗೇಟು ನೀಡಿದ ಕೇಂದ್ರ ಸಚಿವ ಜೋಶಿ

ನವದೆಹಲಿ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸೋಲಿಗೆ ಇವಿಎಂ ದೋಷ ಕಾರಣ ಎಂದು ಹೇಳಿಕೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪರಮೇಶ್ವರ್ ಪ್ರಜ್ಞಾವಂತ, ಪ್ರಬುದ್ಧ ರಾಜಕಾರಣಿ. ಅವರೂ ರಾಹುಲ್ ಗಾಂಧಿಯಂತೆ ಮಾತನಾಡಿದರೆ ಹೇಗೆ? ಎಂದು ಟೀಕಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ರಾಜ್ಯದಲ್ಲಿ ಪರಮೇಶ್ವರ್ ಒಬ್ಬ ಪ್ರಬುದ್ಧ ರಾಜಕಾರಣಿ. ಅವರೂ ಹೀಗೆ ಇವಿಎಂ ಮೇಲೆ ಅನುಮಾನವಿದೆ ಎನ್ನುವುದು ಸರಿಯಲ್ಲ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 135 ಸೀಟುಗಳಿಂದ ಗೆದ್ದಾಗಲೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಇವರಿಗೆ ಆಗ ಇಲ್ಲದ ಇವಿಎಂ ಮೇಲಿನ ಅನುಮಾನ ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದಾಕ್ಷಣ ಬರುತ್ತದೆ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.

ಮಹಾರಾಷ್ಟ್ರದಲ್ಲಿ ಇವಿಎಂ ಗೋಲ್ ಮಾಲ್ ಆಗಿದೆ ಎಂಬ ಗೃಹ ಸಚಿವ ಪರಮೇಶ್ವರ್ ಅವರ ಆರೋಪಕ್ಕೆ ಅರ್ಧವಿಲ್ಲ. ಮಹಾರಾಷ್ಟ್ರ ಸೋಲಿಗೆ ಇವಿಎಂ ದೋಷ ಎನ್ನುವುದಾದರೆ ಕಾಂಗ್ರೆಸ್ ಜಾರ್ಖಂಡ್ ನಲ್ಲಿ ಹೇಗೆ ಗೆದ್ದಿತು? ಎಂದು ಕೇಳಿದದರೆ. ಸೋತ ಕಾರಣಕ್ಕೆ ಈ ರೀತಿ ಅಪ್ರಬುದ್ಧರಂತೆ ಮಾತಾಡಬಾರದು ಎಂದರು.

ರಾಜ್ಯ ರಾಜಕಾರಣದಲ್ಲಿ ಪರಮೇಶ್ವರ್ ಒಬ್ಬ ಗೌರವಾನ್ವಿತ ಪ್ರಬುದ್ಧ ವರಿಷ್ಠರು. ಈಗ ಅವರೂ ರಾಹುಲ್ ಗಾಂಧಿ ಅವರಂತೆ ಮಾತನಾಡಲು ಆರಂಭಿಸಿದ್ದಾರೆ ಎಂದುರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read