ಸುಧಾಕರ್ ಸೋಲಿಸಿದ್ದಕ್ಕೆ ಸಿದ್ಧರಾಮಯ್ಯ, ಡಿಕೆಶಿ ಖುಷಿ: ಜನ ನನ್ನನ್ನು ಸೆಲೆಬ್ರಿಟಿ ರೀತಿ ಕಾಣ್ತಿದ್ದಾರೆ: ನೂತನ ಶಾಸಕ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ: ಡಾ.ಕೆ. ಸುಧಾಕರ್ ಅವರನ್ನು ಸೋಲಿಸಿದ್ದಕ್ಕೆ ಸಿದ್ದರಾಮಯ್ಯ ಹಾಲು ಕುಡಿದಷ್ಟು ಖುಷಿಪಟ್ಟರು. ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ನನ್ನನ್ನು ಅಭಿನಂದಿಸಿ ಆಶೀರ್ವಾದ ಮಾಡಿದರು. ಕೆ.ಸಿ. ವೇಣುಗೋಪಾಲ್ ತಬ್ಬಿಕೊಂಡು ಸಂತೋಷ ಹಂಚಿಕೊಂಡರು. ಸುಧಾಕರ್ ವಿರುದ್ಧ ಗೆದ್ದಿದ್ದಕ್ಕೆ ಸೆಲೆಬ್ರಿಟಿ ರೀತಿ ನೋಡುತ್ತಿದ್ದಾರೆ. ಜನರ ಪ್ರೀತಿ, ಅಭಿಮಾನ ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ. ನಾನು ನಿರಂತರವಾಗಿ ಕ್ಷೇತ್ರದ ಜನರ ಜೊತೆ ಇರಲು ಬಯಸುತ್ತೇನೆ. ಚಿಕ್ಕಬಳ್ಳಾಪುರ ಕ್ಷೇತ್ರದ ಜನರ ಕಷ್ಟ ಸುಖದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನನಗೆ ಎರಡು ಕಣ್ಣುಗಳಿದ್ದಂತೆ. ಯಾರೇ ಮುಖ್ಯಮಂತ್ರಿಯಾದರು ಸಂತೋಷ. ಇಬ್ಬರೂ ನನಗೆ ತಂದೆ ತಾಯಿ ಇದ್ದಂತೆ. ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read