Adipurush Movie : ‘ಆದಿಪುರುಷ್’ ಚಿತ್ರ ಚೆನ್ನಾಗಿಲ್ಲ ಎಂದ ಸಿನಿಪ್ರೇಮಿಗೆ ಥಳಿಸಿದ ಪ್ರಭಾಸ್ ಅಭಿಮಾನಿಗಳು

ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರ ಇಂದು ಶುಕ್ರವಾರ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಬಹಳ ಕುತೂಹಲವಿತ್ತು, ಇಂದು ಸಿನಿಮಾ ಬಿಡುಗಡೆಯಾಗಿದ್ದು ಚಿತ್ರದ ಬಗ್ಗೆ ಹಲವಾರು ಅಭಿಪ್ರಾಯ ವ್ಯಕ್ತವಾಗಿದೆ.

ಕೆಲವರು ಸಿನಿಮಾ ಚೆನ್ನಾಗಿದೆ ಎಂದರೆ, ಕೆಲವರು ಚೆನ್ನಾಗಿಲ್ಲ ಎಂದಿದ್ದಾರೆ. ಇಲ್ಲಿಯವರೆಗೆ ಸೋಶಿಯಲ್ ಅಭಿಮಾನಿಗಳಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿದೆ. ಆದಾಗ್ಯೂ, ಚಿತ್ರದ ಬಗ್ಗೆಯೂ ಟೀಕೆಗಳು ಬಂದಿವೆ.
ಸಿನಿಪ್ರಿಯರೊಬ್ಬರು ಆದಿಪುರುಷ್ ಚಿತ್ರ ಚೆನ್ನಾಗಿಲ್ಲ ಎಂದು ಹೇಳಿದ್ದಕ್ಕೆ ಪ್ರಭಾಸ್ ಅಭಿಮಾನಿಗಳು ಥಳಿಸಿದ್ದಾರೆ. ಆದಿಪುರುಷ್ ಸಿನಿಮಾ ತೀರಾ ಕಳಪೆಯಾಗಿದೆ ಎಂದಿದ್ದಾನೆ. ಪ್ರಭಾಸ್ಗೆ ಶ್ರೀರಾಮನ ಪಾತ್ರ ಸರಿಯಾಗಿ ಹೊಂದಿಲ್ಲ ಎಂದು ಹೇಳಿದ್ದಾನೆ. ಇದಕ್ಕೆ ಗರಂ ಆದ ಪ್ರಭಾಸ್ ಅಭಿಮಾನಿಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

“ಹುಚ್ಚು ಅಭಿಮಾನಿಗಳ ಮುಂದೆ ಎಂದಿಗೂ ಸತ್ಯವನ್ನು ಮಾತನಾಡಬೇಡಿ. ಇದು ಕ್ರಿಕೆಟ್, ರಾಜಕೀಯ, ಚಲನಚಿತ್ರಗಳು ಇತ್ಯಾದಿಗಳಿಗೆ ಅನ್ವಯಿಸುತ್ತದೆ. ಹುಚ್ಚು ಅಭಿಮಾನಿಗಳು ಟೀಕೆಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read