HomeBusinessಹಗಲು ವಿದ್ಯುತ್ ಬಳಕೆಗೆ ಶೇ. 20ರಷ್ಟು ರಿಯಾಯಿತಿ, ರಾತ್ರಿ ಶೇ. 20ರಷ್ಟು ಹೆಚ್ಚು ದರ

ಹಗಲು ವಿದ್ಯುತ್ ಬಳಕೆಗೆ ಶೇ. 20ರಷ್ಟು ರಿಯಾಯಿತಿ, ರಾತ್ರಿ ಶೇ. 20ರಷ್ಟು ಹೆಚ್ಚು ದರ

ನವದೆಹಲಿ: ವಿದ್ಯುತ್ ಬಳಕೆಗೆ ಹಗಲು ವೇಳೆ ಶೇಕಡ 20ರಷ್ಟು ರಿಯಾಯಿತಿ ನೀಡಿ ರಾತ್ರಿ ವೇಳೆ ಶೇಕಡ 20ರಷ್ಟು ಹೆಚ್ಚು ಶುಲ್ಕ ವಿಧಿಸುವ ಹೊಸ ನೀತಿ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

ಎರಡು ವರ್ಷಗಳಲ್ಲಿ ಕೇಂದ್ರದಿಂದ ಹೊಸ ರೀತಿ ಜಾರಿಯಾಗುವ ಸಾಧ್ಯತೆ ಇದೆ. ಹಗಲು ಹೊತ್ತಿನಲ್ಲಿ ಕಡಿಮೆ ದರ ಮತ್ತು ರಾತ್ರಿ ವೇಳೆ ಹೆಚ್ಚು ದರ ಅನ್ವಯವಾಗುವ ನೀತಿ ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇಂದ್ರ ಇಂಧನ ಖಾತೆ ಸಚಿವ ಆರ್.ಕೆ. ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ವಾಣಿಜ್ಯ ಬಳಕೆದಾರರಿಗೆ 2024ರ ಏಪ್ರಿಲ್ 1ರಿಂದ ಮತ್ತು ಗೃಹಬಳಕೆದಾರರಿಗೆ 2025 ಏಪ್ರಿಲ್ 1ರಿಂದ ಈ ದರ ನಿಯಮ ಜಾರಿಗೆ ಬರಲಿದೆ. ಕಡಿಮೆ ಪ್ರಮಾಣದ ವಿದ್ಯುತ್ ಬಳಸುವ ಹಗಲು ಹೊತ್ತಿನಲ್ಲಿ ಶುಲ್ಕ ಕಡಿತವಾಗುತ್ತದೆ. ಹೆಚ್ಚು ಬೇಡಿಕೆಯ ವಿದ್ಯುತ್ ಬಳಕೆಯ ರಾತ್ರಿ ಹೊತ್ತಲ್ಲಿ ವಿದ್ಯುತ್ ದರ ಹೆಚ್ಚಾಗಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular