HomeEntertainmentಸ್ವಾತಂತ್ರ್ಯ ದಿನಾಚರಣೆಯಂದು ತೆರೆ ಮೇಲೆ ಬರಲಿದೆ 'ಪೌಡರ್'

ಸ್ವಾತಂತ್ರ್ಯ ದಿನಾಚರಣೆಯಂದು ತೆರೆ ಮೇಲೆ ಬರಲಿದೆ ‘ಪೌಡರ್’

 

ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ದೂದ್ ಪೇಡ ದಿಗಂತ್ ಅಭಿನಯದ ಬಹುನಿರೀಕ್ಷಿತ ‘ಪೌಡರ್’ ಚಿತ್ರ ಈಗಾಗಲೇ ತನ್ನ ಟೀಸರ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದ್ದು, ತೆರೆ ಮೇಲೆ ಬರಲು ಸಜ್ಜಾಗಿದೆ. ಪೌಡರ್ ಚಿತ್ರ ತಂಡ ನಿನ್ನೆ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದು, ಅಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಸಿನಿಮಾ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಕಾರ್ತಿಕ್ ಗೌಡ, ಯೋಗೇಶ್ ಜಿ ರಾಜ್, ವಿಜಯ್ ಸುಬ್ರಹ್ಮಣ್ಯಂ ಹಾಗೂ  ಅರುಣ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆ ನೀಡಿದ್ದಾರೆ. ದಿಗಂತ್ ಸೇರಿದಂತೆ ಧನ್ಯ ರಾಮ್‌ಕುಮಾರ್, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಅನಿರುದ್ಧ್ ಆಚಾರ್ಯ ತೆರೆ ಹಂಚಿಕೊಂಡಿದ್ದಾರೆ. ಹರಿಕೃಷ್ಣ ಮತ್ತು ಗೌತಮ್ ಪಲ್ಲಕ್ಕಿ ಸಂಕಲನವಿದ್ದು, ತ್ರಿಲೋಕ್ ತ್ರಿವಿಕ್ರಮ ಅವರ ಸಂಭಾಷಣೆ, ಅರುಣ್ ರಾಜ್  ಸಾಹಸ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

Image

For Latest News Updates, Join Our Whatsapp Community🚩
RELATED ARTICLES

Most Popular