HomeEntertainment'ಪೌಡರ್' ಚಿತ್ರದ ಲಿರಿಕಲ್ ಹಾಡು ರಿಲೀಸ್

‘ಪೌಡರ್’ ಚಿತ್ರದ ಲಿರಿಕಲ್ ಹಾಡು ರಿಲೀಸ್

ದೂದ್ ಪೇಡ ದಿಗಂತ್ ಅಭಿನಯದ ಪೌಡರ್ ಚಿತ್ರದ ಲಿರಿಕಲ್ ಹಾಡನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ಮಿಷನ್ ಗಮ ಗಮ ಎಂಬ ಈ ಹಾಡಿಗೆ mc ಬಿಜ್ಜು  ಧ್ವನಿಯಾಗಿದ್ದು, ವಾಸುಕಿ ವೈಭವ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ರೋಮ್ಯಾಂಟಿಕ್ ಕಾಮಿಡಿ ಕಥಾದಾರಿತ ಈ ಚಿತ್ರವನ್ನು ಜನಾರ್ಧನ್ ಚಿಕ್ಕಣ್ಣ ನಿರ್ದೇಶಿಸಿದ್ದು,  ಕೆ ಆರ್ ಜಿ ಸ್ಟುಡಿಯೋಸ್ ಹಾಗೂ ಟಿವಿ ಎಫ್ ಬ್ಯಾನರ್ ನಲ್ಲಿ ಕಾರ್ತಿಕ್ ಹಾಗೂ ಯೋಗಿ ಜೀ ರಾಜ್ ನಿರ್ಮಾಣ ಮಾಡಿದ್ದಾರೆ. ದಿಗಂತ್ ಮಂಚಾಲೆ ಸೇರಿದಂತೆ ಧನ್ಯ ರಾಮ್‌ಕುಮಾರ್, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಅನಿರುದ್ಧ ಆಚಾರ್ಯ, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ, ಹುಲಿ ಕಾರ್ತಿಕ್, ತೆರೆ ಹಂಚಿಕೊಂಡಿದ್ದಾರೆ. ಹರಿಕೃಷ್ಣ ಹಾಗೂ ಗೌತಮ್ ಪಲ್ಲಕ್ಕಿ ಸಂಕಲನ, ತ್ರಿಲೋಕ್ ತ್ರಿವಿಕ್ರಮ್ ಸಂಭಾಷಣೆ, ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular