ಹಾಸನ : ಆಲೂಗಡ್ಡೆ ಬೆಳೆಯು ಹಾಸನ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ವರ್ಷದಿಂದ ವರ್ಷಕ್ಕೆ ಬೆಳೆಯ ವಿಸ್ತೀರ್ಣ ಕುಸಿಯುತ್ತಿದೆ ರೈತರು ಬೆಳೆ ಬೆಳೆಯಲು ಉತ್ತೇಜನ ನೀಡಬೇಕು ಎಂದು ಸಂಸದರಾದ ಶ್ರೇಯಸ್ ಎಂ ಪಟೇಲ್ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಆಲೂಗಡ್ಡೆ ಬೆಳೆಯ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಉತ್ತಮ ಗುಣಮಟ್ಟದ ಬಿತ್ತನೆ ಬೀಜವನ್ನು ಕೃಷಿಕರಿಗೆ ಒದಗಿಸಲು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
2026-27 ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಆಲೂಗಡ್ಡೆಯ ಮಾರಾಟ ದರವನ್ನು 1200 ರೂ ಗಳಿಗೆ ನಿಗದಿ ಪಡಿಸಲಾಯಿತು ಮತ್ತು ಮಾರಾಟ ಪ್ರಕ್ರಿಯೆ ಮೇ.15 ರಿಂದ ಪ್ರಾರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.ರೈತರ ಹಿತ ಕಾಯುವ ದೃಷ್ಟಿಯಿಂದ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸುವಂತೆ ರೈತರಿಗೆ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಸಕರಾದ ಸ್ವರೂಪ ಪ್ರಕಾಶ್ ಅವರು ಮಾತನಾಡಿ. ಎ.ಪಿ.ಎಂ.ಸಿ ಯಲ್ಲಿ ವರ್ತಕರು ನೋಂದಣಿ ಆಗಬೇಕು ಜೊತೆಗೆ ಅದೇ ಪ್ರಾಂಗಣದಲ್ಲಿ ಬಿತ್ತನೆ ಬೀಜ ಮಾರಾಟ ಮಾಡಬೇಕು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಮಾತನಾಡಿ ಬಿತ್ತನೆ ಬೀಜದ ಬಗ್ಗೆ ಯಾವುದೇ ದೂರುಗಳು ಬಂದರೆ ಈಗಾಗಲೇ ರಚನೆಗೊಂಡಿರುವ ತಂಡ ತಕ್ಷಣ ಕ್ರಮ ವಹಿಸಬೇಕು ಸೂಚನೆ ನೀಡಿದರು.
ಈಗಾಗಲೇ ಬಿತ್ತನೆ ಬೀಜದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ರೋಗಗ್ರಸ್ತ ಬೀಜ ಎಂದು ಕಂಡುಬAದಿರುವುದನ್ನು ಮಾರಾಟ ಮಾಡುವಂತಿಲ್ಲ ಎಂದು ತಿಳಿಸಿದರು. ಮುನ್ನೇಚ್ಚರಿಕರ ಕ್ರಮವಾಗಿ ಅಂಗಮಾರಿ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ರೈತರಿಗೆ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ಒದಗಿಸಬೇಕು ಹಾಗೂ ಬಿತ್ತನೆ ಬೀಜ ಖರೀದಿಸಿದ ವೇಳೆಯಲ್ಲಿ ಕಡ್ಡಾಯವಾಗಿ ಬಿಲ್ ಅನ್ನು ನೀಡಬೇಕು ಎಂದು ತಿಳಿಸಿದರು.ಇದೇ ವೇಳೆಯಲ್ಲಿ ಆಲೂಗಡ್ಡೆ ಬೆಳೆಯ ಕುರಿತಾದ ಮಾಹಿತಿಯ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು. ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಯೋಗೇಶ್, ರೈತ ಸಂಘದ ಮುಖಂಡರಾದ ಮೂರ್ತಿ, ವರ್ತಕರ ಸಂಘದ ಅಧ್ಯಕ್ಷರಾದ ಗೋಪಾಲ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

