ಕ್ಯಾಥೋಲಿಕ್ ಕ್ರೈಸ್ತರ ಧರ್ಮಗುರು ಪೋಪ್ ಫಾನ್ಸಿಸ್ ನಿಧನರಾಗಿದ್ದಾರೆ. 88 ವರ್ಷದ ಪೋಪ್ ಫ್ರಾನ್ಸಿಸ್ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ವ್ಯಾಟಿಕನ್ ಸಿಟಿಯ ತಮ್ಮ ನಿವಾಸದಲ್ಲಿ ಪೋಪ್ ಫ್ರಾನ್ಸಿಸ್ ವಿಧಿವಶರಾಗಿದ್ದಾರೆ. ಈಸ್ಟರ್ ಹಬ್ಬದ ಶುಭಾಷಯಗಳನ್ನು ಕೀರಿದ್ದ ಕೆಲವೇ ಗಂಟೆಗಳಲ್ಲಿ ಪೋಫ್ ಫ್ರಾನ್ಸಿಸ್ ವಿಧಿವಶರಾಗಿದ್ದಾರೆ.
ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೋಪ್ ಫ್ರಾನ್ಸಿಸ್ ಬಳಿಕ ವ್ಯಾಟಿಕನ್ ಸಿಟಿಯ ತಮ್ಮ ನಿವಾಸಕ್ಕೆ ಆಗಮಿಸಿದ್ದರು. ತಮ್ಮ ನಿವಾಸದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಪೋಪ್ ಫ್ರಾನ್ಸಿಸ್ ರೋಮ್ ನ ಕ್ಯಾಥೋಲಿಕ್ ಚರ್ಚ್ ನ ಮೊದಲ ಲ್ಯಾಟಿನ್ ಅಮೆರಿಕನ್ ಪೋಪ್ ಆಗಿದ್ದರು.