HomeIPL 2026ಈ ಹಿಂದೆ ನರೈನ್ ಸೂಪರ್ ಓವರ್ ದಾಳಿಗೆ 5 ಬಾಲ್ ತಿಂದು ಮಣ್ಣು ಮುಕ್ಕಿದ್ದ ಆಟಗಾರನನ್ನು...

ಈ ಹಿಂದೆ ನರೈನ್ ಸೂಪರ್ ಓವರ್ ದಾಳಿಗೆ 5 ಬಾಲ್ ತಿಂದು ಮಣ್ಣು ಮುಕ್ಕಿದ್ದ ಆಟಗಾರನನ್ನು ಮತ್ತೆ ಸೂಪರ್ ಓವರ್ ಆಡಲು ಕಳುಹಿಸಿ ಕೆಟ್ಟ ಲಕ್ನೋ!

ಈ ಹಿಂದೆ ನರೈನ್ ಸೂಪರ್ ಓವರ್ ದಾಳಿಗೆ 5 ಬಾಲ್ ತಿಂದು ಮಣ್ಣು ಮುಕ್ಕಿದ್ದ ಆಟಗಾರನನ್ನು ಮತ್ತೆ ಸೂಪರ್ ಓವರ್ ಆಡಲು ಕಳುಹಿಸಿ ಕೆಟ್ಟ ಲಕ್ನೋ!

ನಿನ್ನೆ ( ಏಪ್ರಿಲ್ 26 ) ಲಕ್ನೋದ ಏಕನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 38ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 155 ರನ್ ಬಾರಿಸಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲ್ಲಲು 156 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ಮುಂದಾದ ಲಕ್ನೋ ಸೂಪರ್ ಜೈಂಟ್ಸ್ ಸಹ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿತು.

ಹೀಗೆ ಡ್ರಾ ಆದ ಕಾರಣ ಸೂಪರ್ ಓವರ್ ಚಾಲ್ತಿಗೆ ಬಂತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಪರ ನಿಕೋಲಸ್ ಪೂರನ್ ಹಾಗೂ ಏಡನ್ ಮಾರ್ಕ್ರಮ್ ಕಣಕ್ಕಿಳಿದರು. ಪೂರನ್ ಸ್ಟ್ರೈಕ್ ತೆಗೆದುಕೊಂಡರು. ಆದರೆ ನರೈನ್ ಎಸೆದ ಮೊದಲ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗುವ ಮೂಲಕ ಪೂರನ್ ನಿರಾಸೆ ಮೂಡಿಸಿದರು.

ಹೀಗೆ ಪೂರನ್ ನರೈನ್ ಬೌಲಿಂಗ್ ದಾಳಿಗೆ ಮಣ್ಣು ಮುಕ್ಕಿದ ಬೆನ್ನಲ್ಲೇ ಈ ಹಿಂದೆ ಇದೇ ರೀತಿ ಸೂಪರ್ ಓವರ್ ನಲ್ಲಿ ಪೂರನ್ ನೆಲಕಚ್ಚಿದ್ದು ನೆನಪಿಗೆ ಬಂದಿದೆ. 2014ರ ಕೆರೆಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸೂಪರ್ ಓವರ್ ನಡೆದಿತ್ತು. ಅದೂ ಸಹ ಟಿ20 ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಏಕೈಕ ಮೇಡನ್ ಸೂಪರ್ ಓವರ್. ನರೈನ್ ಬೌಲಿಂಗ್ ಎದುರಿಸಿದ್ದ ಪೂರನ್ ಸತತವಾಗಿ ನಾಲ್ಕು ಎಸೆಗಳಿಗೆ ಬ್ಯಾಟ್ ತಾಗಿಸಲಾಗದೆ ವಿಫಲರಾಗಿದ್ದರು. ಐದನೇ ಎಸೆತಕ್ಕೆ ಕ್ಯಾಚ್ ನೀಡಿ ಡಕ್ ಔಟ್ ಆಗಿದ್ದರು. ಹೀಗೆ ನರೈನ್ ಬೌಲಿಂಗ್ ವಿರುದ್ಧ ಸೂಪರ್ ಓವರ್ ನಲ್ಲಿ ಪರದಾಡಿ ಔಟ್ ಆಗಿದ್ದ ಆಟಗಾರನನ್ನು ನಂಬಿ ಮತ್ತೆ ಕಣಕ್ಕಿಳಿಸಿದ ಲಕ್ನೋ ಸೂಪರ್ ಜೈಂಟ್ಸ್ ಕೈ ಸುಟ್ಟಿಕೊಂಡಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular