ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಹತ್ಯೆಯಾದ 18 ವರ್ಷಗಳ ಬಳಿಕ ಪುತ್ರಿಯಿಂದ ಸ್ಪೋಟಕ ಸಂಗತಿ ಬಹಿರಂಗ

ಬಿಜೆಪಿ ನಾಯಕ ದಿವಂಗತ ಪ್ರಮೋದ್ ಮಹಾಜನ್ ಅವರ ಪುತ್ರಿ ಹಾಗೂ ಬಿಜೆಪಿಯ ಮಾಜಿ ಸಂಸದೆ ಪೂನಂ ಮಹಾಜನ್, ತಮ್ಮ ತಂದೆಯವರ ಹತ್ಯೆಯ ಕುರಿತು ಸ್ಪೋಟಕ  ಹೇಳಿಕೆ ನೀಡಿದ್ದು, ಹತ್ಯೆಯು ದೊಡ್ಡ ಪಿತೂರಿ, ಅದು ಅಂತಿಮವಾಗಿ ಬೆಳಕಿಗೆ ಬರಲಿದೆ ಎಂದು ಹೇಳಿದ್ದಾರೆ. ಘಟನೆ ನಡೆದ 18 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕುಟುಂಬದ ಸದಸ್ಯರೊಬ್ಬರು ಅಮಾನುಷವಾಗಿ ನಡೆದ ಹತ್ಯಾ ಘಟನೆಯ ವಿವರಗಳನ್ನು ನೀಡಿದ್ದಾರೆ.

Zee 24 ತಾಸ್‌ನ ‘ಜಾಹಿರ್ ಸಭಾ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೂನಂ ಮಹಾಜನ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದು, “ಪ್ರಮೋದ್ ಮಹಾಜನ್ ಅವರ ಕೊಲೆ ಹಣ ಅಥವಾ ಅಸೂಯೆಗಾಗಿ ನಡೆದಿಲ್ಲ ಅಥವಾ ಯಾವುದೇ ಕೌಟುಂಬಿಕ ಸಮಸ್ಯೆಯಿಂದಲ್ಲ” ಎಂದು ಹೇಳಿದ್ದಾರೆ.

2006 ರಲ್ಲಿ, ಪ್ರಮೋದ್ ಮಹಾಜನ್ ಅವರ ಮೇಲೆ ಸ್ವಂತ ಸಹೋದರ ಪ್ರವೀಣ್ ಮಹಾಜನ್ ಗುಂಡು ಹಾರಿಸಿದ್ದರು. ಇದು ಅವರ ಯಕೃತ್ತು, ಮೇದೋಜ್ಜೀರಕ ಗ್ರಂಥಿ ಮತ್ತು ಕರುಳುಗಳನ್ನು ವ್ಯಾಪಕವಾಗಿ ಹಾನಿಗೊಳಿಸಿ ಭಾರೀ ಆಂತರಿಕ ರಕ್ತಸ್ರಾವವನ್ನು ಉಂಟುಮಾಡಿತ್ತು. ಮಾರಣಾಂತಿಕವಾಗಿ ಗಾಯಗೊಂಡಿದ್ದ ಪ್ರಮೋದ್‌ ಮಹಾಜನ್ 13 ದಿನಗಳ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ನಂತರ‌ ಈ ಅಪರಾಧ ಎಸಗಿದ್ದ ಅವರ ಸಹೋದರ ಪ್ರವೀಣ್ ತನ್ನ ದುಷ್ಕೃತ್ಯವನ್ನು ಒಪ್ಪಿಕೊಂಡಿದ್ದ.

ಪೂನಂ ಮಹಾಜನ್ ಹೇಳಿದ್ದೇನು ?

ನಿಮ್ಮ ತಂದೆಯವರನ್ನು ಹತ್ಯೆ ಮಾಡಿದ್ದು ಅವರ ಸಹೋದರ ಹಾಗೂ ನಿಮ್ಮ ಸ್ವಂತ ಚಿಕ್ಕಪ್ಪನಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೂನಂ, ಅವರು ಕೋಪ ಅಥವಾ ಅಸೂಯೆಯಿಂದ ಗುಂಡು ಹಾರಿಸಿಲ್ಲ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ. ಒಂದು ದಿನ, ಬಹುಶಃ ಇಂದು ಅಥವಾ ನಾಳೆ, ಸತ್ಯ ಬಹಿರಂಗವಾಗುತ್ತದೆ, ಮತ್ತು ಇದು ಏಕೆ ಸಂಭವಿಸಿತು ಎಂಬುದು ಬಯಲಾಗಲಿದೆ ಎಂದರಲ್ಲದೇ, ಸಹೋದರರ ನಡುವೆ ಯಾವುದೇ ಜಗಳ ಇರಲಿಲ್ಲ, ಆದರೆ ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂಬ ಸ್ಪೋಟಕ ಸಂಗತಿ ಬಿಚ್ಚಿಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read