HomeKarnatakaಪೊಲೀಸರ ಮನೆಗೆ ಕನ್ನ ಹಾಕಿದ ಕಳ್ಳರು: ಚಿನ್ನಾಭರಣ, ಹಣ, ರೇಷ್ಮೆ ಸೀರೆ ಕದ್ದು ಪರಾರಿ

ಪೊಲೀಸರ ಮನೆಗೆ ಕನ್ನ ಹಾಕಿದ ಕಳ್ಳರು: ಚಿನ್ನಾಭರಣ, ಹಣ, ರೇಷ್ಮೆ ಸೀರೆ ಕದ್ದು ಪರಾರಿ

ಬೆಂಗಳೂರು: ಕಳ್ಳ ಖದೀನರಿಗೆ ಪೊಲೀಸರೆಂದರೆ ಕಿಂಚಿತ್ತೂ ಭಯವೆಂಬುದು ಇಲ್ಲ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರ ಮನೆಗೆ ಕಳ್ಳರು ಕನ್ನ ಹಾಕಿ ಕೈಚಳಕ ತೋರಿಸಿದ್ದಾರೆ.

ಜಾಲಹಳ್ಳಿಯ ಹೆಚ್ ಎಟಿ ಪೊಲೀಸ್ ಕ್ವಾಟ್ರಸ್ ನಲ್ಲಿ ವಾಸವಿದ್ದ ಪೊಲೀಸ್ ಕಾನ್ಸ್ ಟೇಬಲ್ ಶ್ರೀಧರ್ ಎಂಬುವವರ ಮನೆಗೆ ನುಗ್ಗಿದ ಕಳ್ಳರು, ಮನೆಯಲ್ಲಿದ್ದ ಚಿನ್ನಾಭರಣ, ಹಣ, ರೇಷ್ಮೆ ಸೀರೆಗಳನ್ನು ಕದ್ದು ಪರಾರಿಯಾಗಿದ್ದಾರೆ.

ಶ್ರೀಧರ್ ಹಾಗೂ ಪತ್ನಿ ಸಂಬಂಧಿಕರ ಮನೆಗೆಂದು ಮುರುಗೇಶ್ ಪಾಳ್ಯಕ್ಕೆ ತೆರಳಿದ್ದರು. ಈ ವೇಳೆ ಜಾಲಹಳ್ಳಿಯ ಪೊಲೀಸ್ ಕ್ವಾಟ್ರೆಸ್ ಗೆ ನುಗ್ಗಿದ ಕಳ್ಳರ ಗುಂಪು ಮನೆಯಲ್ಲಿದ್ದ ಚಿನ್ನದ ನೆಕ್ಲೇಸ್, ಓಲೆ, ರೇಷ್ಮೆ ಸೀರೆ, ಹಣವನ್ನು ದೋಚಿ ಎಸ್ಕೇಪ್ ಆಗಿದೆ. ಶ್ರೀಧರ್ ಹಾಗೂ ಪತ್ನಿ ಮನೆಗೆ ಬಂದಾಗಲೇ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳ್ಳರ ಬಂಧನಕ್ಕೆ ಬಲೆ ಬೀಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular