ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿದ್ದು, ಗರ್ಭಿಣಿ ಮಹಿಳೆಗೆ ಸ್ಕೂಟಿಯಿಂದ ಡಿಕ್ಕಿ ಹೊಡೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಕೆರಳಿಸಿದೆ.
ಸ್ಕೂಟರ್ ಮೇಲೆ 12,000 ರೂ ಮೊತ್ತದ ಚಲನ್ ಬಾಕಿ ಉಳಿದಿರುವುದು ಧೃಡಪಟ್ಟಿದೆ. ಅದಕ್ಕಾಗಿ ಪೊಲೀಸರು ಸ್ಕೂಟಿಯನ್ನು ತಡೆದಿದ್ದಾರೆ ಎನ್ನಲಾಗಿದೆ.
ತನ್ನ ವಾಹನವನ್ನು ತೆಗೆದುಕೊಳ್ಳಬೇಡಿ ಎಂದು ಮಹಿಳೆ ಬೇಡಿಕೊಂಡರೂ, ಪೊಲೀಸರು ಕ್ಯಾರೇ ಎನ್ನಲಿಲ್ಲ. ಅಲ್ಲದೇ ಪೊಲೀಸ್ ಅಧಿಕಾರಿ ಅಸಭ್ಯವಾಗಿ ವರ್ತಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಗರ್ಭಿಣಿ ಎಂದು ತಿಳಿದಿದ್ದರೂ ಸ್ಕೂಟಿ ನಿಲ್ಲಿಸದೆ ಅವರಿಗೆ ಗುದ್ದಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
इस पुलिस वाले की हिम्मत देखिए, यह किस तरह से एक गर्भवती महिला को अपने स्कूटी से रौंदनें की कोशिश कर रहा है।
— Priya singh (@priyarajputlive) November 19, 2025
यह वीडियो पटना के मरीन ड्राइव का है pic.twitter.com/QapP9avC2J
