ಪೊಲೀಸರಿಗೆ ಗುಡ್ ನ್ಯೂಸ್: ಕಡ್ಡಾಯ ವಾರದ ರಜೆಗೆ ಮತ್ತೆ ಸೂಚನೆ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಡ್ಡಾಯ ವಾರದ ರಜೆ ಸಿಗುತ್ತಿಲ್ಲ ಎಂದು ಮತ್ತೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಕಡ್ಡಾಯವಾಗಿ ಪೊಲೀಸರಿಗೆ ವಾರದ ರಜೆ ನೀಡಲು ಮತ್ತೊಮ್ಮೆ ಆದೇಶ ಹೊರಡಿಸಿದ್ದಾರೆ.

ನಗರ ಪೊಲೀಸ್ ಕಮಿಷನರೇಟ್ ನಲ್ಲಿ ಕಲಸ ನಿರ್ವಹಿಸುತ್ತಿರುವ ಕಾನ್ಸ್ಟೇಬಲ್ ನಿಂದ ಪಿಎಸ್ಐ ವರೆಗಿನ ಅಧಿಕಾರಿಗಳು, ಸಿಬ್ಬಂದಿಗೆ ವಿಶೇಷ ಕರ್ತವ್ಯ ಹೊರತುಪಡಿಸಿ ಕಡ್ಡಾಯ ವಾರದ ರಜೆ ನೀಡಬೇಕು. ದೈನಂದಿನ ಕೆಲಸದ ವೇಳೆ 12 ಗಂಟೆ ಬದಲಿಗೆ 8 ಗಂಟೆ ಮಾತ್ರ ಕರ್ತವ್ಯಕ್ಕೆ ನಿಯೋಜಿಸುವಂತೆ ಆದೇಶ ನೀಡಬೇಕೆಂದು ಅನಾಮಧೇಯ ಪತ್ರ ಬಂದಿದ್ದು, ಈ ಬಗ್ಗೆ ಕ್ರಮಕೈಗೊಂಡಿರುವ ಪ್ರತಾಪ್ ರೆಡ್ಡಿ 2017ರಲ್ಲಿ ಪೋಲಿಸ್ ರಾಜ್ಯ ಪೊಲೀಸ್ ಪ್ರಧಾನ ಕಚೇರಿ ಕಡ್ಡಾಯವಾಗಿ ವಾರದ ರಜೆ ಕುರಿತು ಹೊರಡಿಸಿದ ಸುತ್ತೋಲೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಪೊಲೀಸರು ಯಾವುದೇ ರೀತಿಯ ಮಾನಸಿಕ ಹಿಂಸೆಗೆ ಒಳಗಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅವರ ಅಹವಾಲುಗಳನ್ನು ಆಲಿಸಿ ಕುಂದು ಕೊರತೆಗಳ ನಿವಾರಣೆಗೆ ಸ್ಪಂದಿಸಬೇಕು ಎಂದು ಆಯುಕ್ತರು ಸೂಚನೆ ನೀಡಿದ್ದಾರೆ.

ಪೊಲೀಸ್ ಆಯುಕ್ತರ ಕಚೇರಿ ಆಡಳಿತ ವಿಭಾಗದ ಡಿಸಿಪಿ ಬಿ.ಎಂ. ಲಕ್ಷ್ಮಿ ಪ್ರಸಾದ್ ಆದೇಶ ಹೊರಡಿಸಿದ್ದಾರೆ. ವಾರದಲ್ಲಿ ಒಂದು ದಿನ ರಜೆ ಮತ್ತು ರಜೆ ದಿನ ಕೆಲಸ ಮಾಡಿದ್ದಕ್ಕೆ ನೀಡಬೇಕಾದ ವೇತನ ನೀಡಬೇಕು. ರಜೆ ಮತ್ತು ವೇತನದಿಂದ ವಂಚಿತರಾದರೆ ಮಾನಸಿಕ ಹಿಂಸೆಗೆ ಒಳಪಟ್ಟು ಪೊಲೀಸರು ಶ್ರದ್ಧೆ ನಿಷ್ಠೆಯಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಕಡ್ಡಾಯವಾಗಿ ವಾರದ ರಜೆ ನೀಡಬೇಕು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read