HomeKarnatakaBIG NEWS: ಪೊಲೀಸ್ ಕಾನ್ಸ್ ಟೇಬಲ್ ನಿಂದ ಯುವತಿಗೆ ಮೋಸ: ದೂರು ದಾಖಲು

BIG NEWS: ಪೊಲೀಸ್ ಕಾನ್ಸ್ ಟೇಬಲ್ ನಿಂದ ಯುವತಿಗೆ ಮೋಸ: ದೂರು ದಾಖಲು

ಕಾರವಾರ: ಪೊಲೀಸ್ ಕಾನ್ಸ್ ಟೇಬಲ್ ಒಬ್ಬ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ, ವಂಚಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಬೆಳಕಿಗೆ ಬಂದಿದೆ.

ಮುಂಡಗೋಡ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಗಿರೀಶ್ ಎಸ್.ಎಂ ವಿರುದ್ಧ ಮುಂಡಗೋಡ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ.

ಕಾನ್ಸ್ ಟೇಬಲ್ ಗಿರೀಶ್ ಯುವತಿಯನ್ನು ಮದುವೆಯಾಗಿ ನಂಬಿಸಿ ಮಾತುಕತೆ ನಡೆಸಿ 20 ಲಕ್ಷ ಹಣ ಪಡೆದಿದ್ದನಂತೆ. ಹಣ ಪಡೆದ ಬಳಿಕ ವರಸೆ ಬದಲಿಸಿದ ಗಿರೀಶ್, ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಅಲ್ಲದೇ ಹಣವನ್ನು ವಾಪಾಸ್ ಕೊಡದೇ ವಂಚಿಸಿದ್ದಾನೆ. ನೊಂದ ಯುವತಿ ಉತ್ತರ ಕನ್ನಡ ಜಿಲ್ಲೆಯ ಎಸ್ ಪಿಗೆ ತಿಂಗಳ ಹಿಂದೆಯೇ ದೂರು ನೀಡಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಗಿರೀಶ್ ನನ್ನು ಪ್ರಶ್ನಿಸಿದಾಗ ಅಧಿಕಾರಿಗಳ ಸಮ್ಮುಖದಲ್ಲಿ ಹಣ ವಾಪಾಸ್ ಕೊಡುವುದಾಗಿ ಒಪ್ಪಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಈವರೆಗೂ ಯುವತಿಗೆ ಹಣ ವಾಪಾಸ್ ಕೊಡದೇ ಎಸ್ಕೇಪ್ ಆಗಿದ್ದು, ಯುವತಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಗಿರೀಶ್ ವಿರುದ್ಧ ದೂರು ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular