HomeEntertainmentತೊಟ್ಟ ಡ್ರೆಸ್ ಮತ್ತು ಲಾಕೆಟ್ ನಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ್ರಾ ತಾಪ್ಸಿ ಪನ್ನು ?...

ತೊಟ್ಟ ಡ್ರೆಸ್ ಮತ್ತು ಲಾಕೆಟ್ ನಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ್ರಾ ತಾಪ್ಸಿ ಪನ್ನು ? ನಟಿ ವಿರುದ್ಧ ದೂರು ದಾಖಲು

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಾಲಿವುಡ್ ನಟಿ ತಾಪ್ಸಿ ಪನ್ನು ವಿರುದ್ಧ ಇಂದೋರ್‌ನ ಹಿಂದ್ ರಕ್ಷಕ ಸಂಘಟನೆಯಿಂದ ದೂರು ದಾಖಲಾಗಿದೆ.

ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ ಮತ್ತು ಅಶ್ಲೀಲತೆಯನ್ನು ಹರಡಿದ ಆರೋಪದ ಮೇಲೆ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಿಂದ್ ರಕ್ಷಕ ಸಂಘಟನೆಯ ಸಂಚಾಲಕ ಮತ್ತು ಬಿಜೆಪಿ ಶಾಸಕಿ ಮಾಲಿನಿ ಗೌರ್ ಅವರ ಪುತ್ರ ಏಕಲವ್ಯ ಸಿಂಗ್ ಗೌರ್ ನಟಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಮಾರ್ಚ್ 14, 2023 ರಂದು ನಟಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು, ಈ ಬಗ್ಗೆ ಆಕ್ಷೇಪಿಸಿರುವ ಗೌರ್ ದೂರು ನೀಡಿದ್ದಾರೆ.

ಆರೋಪಿತ ವಿಡಿಯೋನಲ್ಲಿ ನಟಿ ತಾಪ್ಸಿ ಎದೆಯ ಅರ್ಧ ಭಾಗ ಕಾಣುವಂತೆ ಡೀಪ್ ನೆಕ್ ಇರುವ ಡ್ರೆಸ್ ತೊಟ್ಟಿದ್ದು ಮಾತೆ ಲಕ್ಷ್ಮಿಯ ಲಾಕೆಟ್ ಧರಿಸಿದ್ದಾರೆ. ಈ ವಿಡಿಯೋ ಫ್ಯಾಶನ್ ಶೋನಲ್ಲಿದ್ದು, ಆಕೆ ಅಸಭ್ಯ ಉಡುಗೆ ತೊಟ್ಟಿದ್ದಾಳೆ ಎಂದು ಗೌರ್ ಆರೋಪಿಸಿದ್ದಾರೆ.

ದೂರಿನ ಪ್ರಕಾರ ಫ್ಯಾಶನ್ ಶೋನಲ್ಲಿ ಅವರು ಅಸಭ್ಯ ಉಡುಗೆ ಧರಿಸಿದ್ದರು ಮತ್ತು ಇದರೊಂದಿಗೆ ಲಕ್ಷ್ಮಿ ಮಾತೆಯ ಲಾಕೆಟ್ ಅನ್ನು ಕುತ್ತಿಗೆಗೆ ಹಾಕಿಕೊಂಡಿದ್ದರು. ಇದು ಸನಾತನ ಧರ್ಮವನ್ನು ಕೆಡಿಸುವ ಯೋಜಿತ ಪ್ರಯತ್ನ ಎಂದು ಗೌರ್ ಆರೋಪಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular