ಅಸ್ಸಾಂ : ಪ್ರಧಾನಿ ಮೋದಿ ಗುವಾಹಟಿಯಲ್ಲಿ ರೋಡ್ ಶೋ ನಡೆಸಿದ್ದು, ಬಳಿಕ ಒಟ್ಟು 11,600 ಕೋಟಿ ರೂ.ಗಳ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು.
ಗುವಾಹಟಿಯ ಖಾನಪಾರದಲ್ಲಿರುವ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ಒಂದು ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಿದರು. ನಂತರ ಪ್ರಧಾನಿ ಮೋದಿ ಗುವಾಹಟಿಯಲ್ಲಿ ರೋಡ್ ಶೋ ನಡೆಸಿದರು.
ನೆಹರೂ ಕ್ರೀಡಾಂಗಣವನ್ನು ಪರಿವರ್ತಿಸುವ 500 ಕೋಟಿ ರೂ.ಗಳ ಮಾ ಕಾಮಾಕ್ಯ ದಿವ್ಯಲೋಕ ಪರಿಯೋಜನೆ ಮತ್ತು 831 ಕೋಟಿ ರೂ.ಗಳ ಯೋಜನೆಗೆ ಅವರು ಚಾಲನೆ ನೀಡಿದರು. ಇದಲ್ಲದೆ, ಅವರು 3,444 ಕೋಟಿ ರೂ.ಗಳ ಅಸ್ಸಾಂ ಮಾಲಾ 2.0 ಯೋಜನೆಯನ್ನು ಪ್ರಾರಂಭಿಸಿದರು, ರಾಜ್ಯದಾದ್ಯಂತ 43 ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು 38 ಸೇತುವೆಗಳನ್ನು ನಿರ್ಮಿಸುವುದಾಗಿ ಅವರು ಹೇಳಿದರು.
PM Modi dedicates, lays foundation stone for multiple projects worth Rs 11,600 cr in Guwahati
Read @ANI Story | https://t.co/7KbOAW5nrp#PMModiInAssam #Guwahati #Assam pic.twitter.com/CO1Ige1wbH
— ANI Digital (@ani_digital) February 4, 2024

