HomeIndiaರೋಜ್ ಗಾರ್ ಮೇಳ: ಒಂದು ಲಕ್ಷ ಜನರಿಗೆ ಇಂದು ಉದ್ಯೋಗ ನೇಮಕಾತಿ ಪತ್ರ ವಿತರಣೆಗೆ ಮೋದಿ...

ರೋಜ್ ಗಾರ್ ಮೇಳ: ಒಂದು ಲಕ್ಷ ಜನರಿಗೆ ಇಂದು ಉದ್ಯೋಗ ನೇಮಕಾತಿ ಪತ್ರ ವಿತರಣೆಗೆ ಮೋದಿ ಚಾಲನೆ

ನವದೆಹಲಿ: ರೋಜ್ಗಾರ್ ಮೇಳ ಯೋಜನೆಯಡಿ ದೇಶದ 47 ಕಡೆ ಇಂದು ಉದ್ಯೋಗ ನೇಮಕಾತಿ ಪತ್ರ ವಿತರಿಸಲಾಗುವುದು.

ದಾಖಲೆಯ ಒಂದು ಲಕ್ಷ ಜನರಿಗೆ ಉದ್ಯೋಗ ನೇಮಕಾತಿ ಪತ್ರ ವಿತರಣೆಗೆ ಇಂದು ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಈ ಹಿಂದೆ ಸುಮಾರು 70 ಲಕ್ಷ ಜನರಿಗೆ ನೇಮಕಾತಿ ಪತ್ರ ನೀಡಲಾಗಿತ್ತು. ಈಗ ದಾಖಲೆಯ ಒಂದು ಲಕ್ಷ ಜನರಿಗೆ ನೇಮಕಾತಿ ಪತ್ರ ನೀಡಲಾಗುತ್ತಿದೆ.

2022ರ ಅಕ್ಟೋಬರ್ ನಂತರ ಒಟ್ಟು 8 ರೋಜ್ಗಾರ್ ಮೇಳಗಳಲ್ಲಿ ಒಟ್ಟು 8 ಲಕ್ಷ ನೇಮಕಾತಿ ಪತ್ರ ವಿತರಿಸಲಾಗಿದ್ದು, 2024ರ ಅಂತ್ಯದೊಳಗೆ 10 ಲಕ್ಷ ನೇಮಕಾತಿ ಉದ್ದೇಶವನ್ನು ಹೊಂದಿದೆ. ಗುರಿ ತಲುಪಲು ಇನ್ನೂ ಎರಡು ಲಕ್ಷ ಬಾಕಿ ಇದೆ. ದೆಹಲಿಯಲ್ಲಿ ಸೋಮವಾರ ಬೆಳಗ್ಗೆ 10.30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ರೋಜ್ಗಾರ್ ಮೇಳ ಉದ್ಯೋಗ ನೇಮಕಾತಿ ಪತ್ರ ವಿತರಣೆಗೆ ಚಾಲನೆ ನೀಡುವರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular