HomeIndiaಇಂದು ಏಕಕಾಲಕ್ಕೆ 5000 ಸ್ಥಳಗಳಲ್ಲಿ ಯುವ ಮತದಾರರೊಂದಿಗೆ ಮೋದಿ ಸಂವಾದ

ಇಂದು ಏಕಕಾಲಕ್ಕೆ 5000 ಸ್ಥಳಗಳಲ್ಲಿ ಯುವ ಮತದಾರರೊಂದಿಗೆ ಮೋದಿ ಸಂವಾದ

ನವದೆಹಲಿ: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜನವರಿ 25ರಂದು ಬಿಜೆಪಿ ಯುವ ಮೋರ್ಚಾ ವತಿಯಿಂದ ಯುವ ಮತದಾರರ ಜೊತೆ ಸಭೆ ಆಯೋಜಿಸಲಾಗಿದೆ.

ಏಕಕಾಲಕ್ಕೆ 5000 ಸ್ಥಳಗಳಲ್ಲಿ ನವ ಮತದಾರರ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಲಕ್ಷಾಂತರ ಯುವ ಮತದಾರರು ಭಾಗವಹಿಸಲಿದ್ದು, ಇಷ್ಟು ದೊಡ್ಡ ಪ್ರಮಾಣದಲ್ಲಿ ನವ ಮತದಾರರೊಂದಿಗೆ ಪ್ರಧಾನಿಯೊಬ್ಬರು ಇದುವರೆಗೆ ಮಾತನಾಡಿಲ್ಲ. ಕರ್ನಾಟಕದಲ್ಲಿ 250 ಕಡೆ, ಬೆಂಗಳೂರಿನಲ್ಲಿ 60 ಕಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular