ನಾಳೆಯಿಂದಲೇ GST-2.0 ಜಾರಿ: ಎಲ್ಲಾ ಅಗತ್ಯ ವಸ್ತುಗಳ ಬೆಲೆ ಇಳಿಕೆ: ಸ್ವದೇಶಿ ವಸ್ತುಗಳ ಬಳಕೆಗೆ ಪ್ರಧಾನಿ ಮೋದಿ ಕರೆ

ನವದೆಹಲಿ: ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ನವರಾತ್ರಿ ಹಬ್ಬದ ಕೊಡುಗೆ ನೀಡಿದ್ದಾರೆ. ಜಿಎಸ್ ಟಿ ಸುಧಾರಣೆ ಮಾಡಲಾಗಿದ್ದು, ನಾಳೆಯಿಂದಲೇ ಜಿಎಸ್ ಟಿ-2.0 ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶವಾಸಿಗಳಿಗೆ ನವರಾತ್ರಿ ಹಬ್ಬದ ಶುಭಾಷಯಗಳು. ನಾಳೆಯಿಂದ ನವರಾತ್ರಿ ಹಬ್ಬ ಆರಂಭವಾಗಲಿದೆ. ನಾಳೆ ಸೂರ್ಯೋದಯದಿಂದಲೇ ಜಿಎಸ್ ಟಿ ಕಡಿತ ಜಾರಿಗೆ ಬರಲಿದ್ದು, ಅಗತ್ಯವಸ್ತುಗಳು, ಔಷಧಿಗಳು, ಆಹಾರ ಸಾಮಗಿಗಳು, ವಾಹನಗಳ ಬೆಲೆಯೂ ಕಡಿಮೆಯಗಲಿದೆ ಎಂದು ಘೋಷಿಸಿದರು.

ನವರಾತ್ರಿ ಹಬ್ಬದ ಆರಂಭದ ದಿನದಿಂದಲೇ ದೇಶದ ಜನತೆಯ ಉಳಿತಾಯ ಉತ್ಸವ ಆರಂಭವಾಗಲಿದೆ. ಜಿಎಸ್ ಟಿ ಸುಧಾರಣೆ ದೇಶದ ಅಭಿವೃದ್ಧಿಗೆ ಶಕ್ತಿ ನೀಡಲಿದೆ. ದಶಕಗಳಿಂದ ಜನರು ಬೇರೆ ಬೇರೆ ರೀತಿಯ ತೆರಿಗೆಯಿಂದ ಬಳಲುತ್ತಿದ್ದರು. ಪ್ರತಿಯೊಂದು ಜಾಗದಲ್ಲಿ ವಿವಿಧ ರೀತಿಯ ತೆರಿಗೆ ಜಾರಿಯಲ್ಲಿತ್ತು. ಇದರಿಂದ ಬೆಂಗಳೂರು-ಹೈದರಾಬಾದ್ ಗೆ ಉತ್ಪನ್ನಗಳನ್ನು ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ತೆರಿಗೆ, ಟೋಲ್ ಗಳಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದರು. ನಾಳೆಯಿಂದ ಇವುಗಳು ಕಡಿತವಾಗಲಿದ್ದು,ಪ್ರತಿ ಮನೆಯಲ್ಲಿಯೂ ಸಂತಸ-ಸಂಭ್ರಮ ಮನೆ ಮಾಡಲಿದೆ ಎಂದರು.

ಒನ್ ನೇಷನ್, ಒನ್ ಟ್ಯಾಕ್ಸ್ ಕನಸು ನನಸಾಗಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ಜಿಎಸ್ ಟಿ ಸುಧಾರಣೆ ಮಾಡಲಾಗಿದೆ. ಇದು ಹೊಸ ಪೀಳಿಗೆಗೆ ಸಹಕಾರಿಯಾಗಲಿದೆ. ನಮ್ಮ ದೈನಂದಿನ ಬಳಕೆ ವಸ್ತಿಗಳಲ್ಲಿ ವಿದೇಶಿ ವಸ್ತುಗಳ ಅವಲಂಭನೆ ಹೆಚ್ಚಾಗಿತ್ತು. ಇನ್ಮುಂದೆ ಸ್ವದೇಶಿ ವಸ್ತುಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕರೆ ನೀಡಿದರು.

ವಿದೇಶಿ ರಾಷ್ಟ್ರಗಳ ಮೇಲಿನ ಅವಲಂಭನೆ ಭಾರತದ ಹಿನ್ನಡೆಗೆ ಕಾರಣವಾಗುತ್ತದೆ. ಈ ದುರ್ಬಲತೆ ನಿವಾರಿಸಲು ಎಲ್ಲರೂ ಒಗ್ಗೂಡಬೇಕು. ಹೆಚ್ಚೆಚು ಸ್ವದೇಶಿ ವಸ್ತುಗಳ ಬಳಕೆ ಮಾಡುವುದರಿಂದ ದೇಶದ ಅಭಿವೃದ್ಧಿ, ಬೆಳವಣಿಗೆಗೆ ಪೂರಕವಾಗಲಿದೆ ಎಂದರು. ಹೊಸ ಜಿಎಸ್ ಟಿಯಲ್ಲಿ ಕೇವಲ ಶೇ.5 ಹಾಗೂ ಶೇ. 18 ತೆರಿಗೆ ವಿಧಿಸಲಾಗಿದೆ. ಇದರಿಂದ ಸಣ್ಣ ಉದ್ಯಮ, ಕೈಗಾರಿಕೆ, ಗೃಹ ಕೈಗಾರಿಕೆಗಳಿಗೂ ಅನುಕೂಲವಾಗಲಿದೆ. ಸಮಯ ಬದಲಾದಂತೆ ದೇಶದ ಅಗತ್ಯತೆಯೂ ಬದಲಾಗುತ್ತದೆ. 12 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಆಹಾರ ವಸ್ತುಗಳು, ಔಷಧಿ, ಸಾಬೂನು, ಬ್ರಷ್, ಟೂತ್ ಪೇಸ್ಟ್, ಸೋಪ್, ಆರೋಗ್ಯ ಹಾಗೂ ಜೀವವಿಮೆ, ಕಾರು, ಬೈಕ್, ಸೈಕಲ್, ಹಾಲು, ಮೊಸರು, ಬೆಣ್ಣೆ, ಹೇರ್ ಆಯಿಲ್, ಮಕ್ಕಳ ಕಲಿಕಾ ಸಾಮಗ್ರಿಗಳು, ಫ್ರಿಡ್ಜ್, ವಾಷಿಂಗ್ ಮಷಿನ್, ಟಿವಿ ಹೀಗೆ ಎಲ್ಲಾ ಅಗತ್ಯ ವಸ್ತುಗಳ ಹಾಗೂ ಆಹಾರಗಳ ಬೆಲೆಯೂ ಕಡಿತಗೊಳ್ಳಲಿದೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read