ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ 45 ಗಂಟೆಗಳ ಸುದೀರ್ಘ ಧ್ಯಾನವನ್ನು ಪೂರ್ಣಗೊಳಿಸಿದರು.
ಕನ್ಯಾಕುಮಾರಿಯಲ್ಲಿ ಮೂರು ದಿನಗಳ ಧ್ಯಾನ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂಜೆ ತಮಿಳುನಾಡಿನ ವಿವೇಕಾನಂದ ರಾಕ್ ಮೆಮೋರಿಯಲ್ ಗೆ ಆಗಮಿಸಿದ್ದರು. ಇದೀಗ ಪ್ರಧಾನಿ ಮೋದಿ ಅವರು ಕನ್ಯಾಕುಮಾರಿಯಲ್ಲಿ 45 ಗಂಟೆಗಳ ಸುದೀರ್ಘ ಧ್ಯಾನವನ್ನು ಪೂರ್ಣಗೊಳಿಸಿದರು. ಪ್ರಧಾನಿ ವಿವೇಕಾನಂದ ರಾಕ್ ನಲ್ಲಿ ಧ್ಯಾನಮಗ್ನರಾಗಿರುವ ವಿಡಿಯೋ ಕೂಡ ವೈರಲ್ ಆಗಿದೆ.
ಹಿಂದೂ ತತ್ವಜ್ಞಾನಿ ಸ್ವಾಮಿ ವಿವೇಕಾನಂದರು ‘ಭಾರತ ಮಾತೆ’ ಬಗ್ಗೆ ದೈವಿಕ ದರ್ಶನ ಹೊಂದಿದ್ದರು ಎಂದು ನಂಬಲಾದ ಧ್ಯಾನ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಧ್ಯಾತ್ಮಿಕ ಭೇಟಿಗಾಗಿ ಕನ್ಯಾಕುಮಾರಿಗೆ ಆಗಮಿಸಿದ್ದರು.
ಇದರ ನಡುವೆ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಶನಿವಾರ ಕನ್ಯಾಕುಮಾರಿಯಲ್ಲಿ ಮೋದಿಯವರ ಆಧ್ಯಾತ್ಮಿಕ ಚಟುವಟಿಕೆಯನ್ನು ಕೇವಲ “ಫೋಟೋ ಶೂಟ್” ಎಂದು ತಳ್ಳಿಹಾಕಿದ್ದಾರೆ.
#WATCH | Tamil Nadu | PM Narendra Modi meditates at the Vivekananda Rock Memorial in Kanniyakumari, where Swami Vivekananda did meditation. He will meditate here till 1st June. pic.twitter.com/cnx4zpGv5z
— ANI (@ANI) May 31, 2024

