HomeInternationalBREAKING: ರಷ್ಯಾದ ಗುಂಡಿನಿಂದಲೇ ಕಜಕಿಸ್ತಾನ ವಿಮಾನ ದುರಂತ: ಅಜೆರ್ಬೈಜಾನ್ ಅಧ್ಯಕ್ಷ

BREAKING: ರಷ್ಯಾದ ಗುಂಡಿನಿಂದಲೇ ಕಜಕಿಸ್ತಾನ ವಿಮಾನ ದುರಂತ: ಅಜೆರ್ಬೈಜಾನ್ ಅಧ್ಯಕ್ಷ

ಕಜಕಿಸ್ತಾನ್‌ನಲ್ಲಿ ಇತ್ತೀಚೆಗೆ ಪ್ರಯಾಣಿಕ ವಿಮಾನವೊಂದು ಅಪಘಾತಕ್ಕೀಡಾಗಿ 38 ಜನ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರು, ರಷ್ಯಾದ ಭೂಪ್ರದೇಶದಿಂದ ಹಾರಿದ ಗುಂಡಿನಿಂದ ವಿಮಾನ ವಿಮಾನ ಪತನವಾಗಿದೆ ಎಂದು ಹೇಳಿದ್ದಾರೆ ಎಂದು ಅಜೆರ್ಬೈಜಾನ್ ರಾಜ್ಯ ದೂರದರ್ಶನ ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಅಧ್ಯಕ್ಷ ಅಲಿಯೆವ್ ಈ ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ರಷ್ಯಾದಲ್ಲಿ ಕೆಲವು ವಲಯಗಳಿಂದ ಅಪಘಾತದ ಕಾರಣಗಳ ಬಗ್ಗೆ ಸುಳ್ಳು ಹೇಳುವ ಮೂಲಕ ಸತ್ಯವನ್ನು ಮರೆ ಮಾಚಲು ಪ್ರಯತ್ನಿಸುತ್ತಿವೆ ಎಂದು ಅವರು ಟೀಕಿಸಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ವಿಮಾನ ಅಪಘಾತಕ್ಕೆ ಕ್ಷಮೆಯಾಚಿಸಿದ ಒಂದು ದಿನದ ನಂತರ ಅಜೆರ್ಬೈಜಾನ್ ಅಧ್ಯಕ್ಷರ ಹೇಳಿಕೆ ಬಂದಿದೆ. ಇದು ರಷ್ಯಾದ ವಾಯುಪ್ರದೇಶದಲ್ಲಿ ಉಕ್ರೇನಿಯನ್ ಡ್ರೋನ್‌ಗಳಿಗೆ ಪ್ರತಿಕ್ರಿಯೆಯಾಗಿ ಅದರ ವಾಯು ರಕ್ಷಣೆಯನ್ನು ಸಕ್ರಿಯಗೊಳಿಸಿದ “ದುರಂತ ಘಟನೆ” ಎಂದು ರಷ್ಯಾ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಜರ್ ಬೈಜಾನ್ ಅಧ್ಯಕ್ಷ ಇಲ್ಯಾಮ್ ಅಲಿಯೆವ್ ಅವರಿಗೆ ಕರೆ ಮಾಡಿದ ಪುಟಿನ್ ಅವರು ರಷ್ಯಾ ಸೇನೆಯೇ ವಿಮಾನವನ್ನು ಹೊಡೆದುರುಳಿಸಿದೆ ಎಂದು ನೇರವಾಗಿ ಹೇಳಿಲ್ಲವಾದರೂ ಅವರು ಕ್ಷಮೆಯಾಚಿಸಿದ ಪರಿ ಮತ್ತು ರಷ್ಯಾ ಸರ್ಕಾರದ ಅಧಿಕೃತ ಹೇಳಿಕೆಯಿಂದ ಅಜರ್ ಬೈಜಾನ್ ಗೆ ಸೇರಿದ ವಿಮಾನವನ್ನು ರಷ್ಯಾ ಸೇನೆಯೇ ಹೊಡೆದುರುಳಿಸಿದೆ ಎಂದು ಅವರು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular