
ಮೃತ ಪೈಲಟ್ ಗಳಾದ ಅಭಯ್ ಗಡ್ರೂ ಮತ್ತು ಯಶ್ ವಿಜಯ್ ರಾಮುಗಡೆ ಮುಂಬೈ ಮೂಲದವರು ಎಂದು ಗುರುತಿಸಲಾಗಿದೆ.
ಅವಳಿ ಎಂಜಿನ್ ಲಘು ವಿಮಾನ ಪೈಪರ್ ಪಿಎ -34 ಸೆನೆಕಾ ಚಿಲ್ಲಿವಾಕ್ ನಗರದ ಹೋಟೆಲ್ ಹಿಂಭಾಗದ ಮರಗಳು ಮತ್ತು ಪೊದೆಗಳಿಗೆ ಡಿಕ್ಕಿ ಹೊಡೆದಿದೆ ಎಂದು ಕೆನಡಾದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಈ ಘಟನೆಯಲ್ಲಿ ಭಾರತೀಯ ಪ್ರಜೆಗಳಲ್ಲದೆ, ಇನ್ನೋರ್ವ ಪೈಲಟ್ ಸಹ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

