ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಮಾರ್ಕ್ಸ್ ಚಿತ್ರಕ್ಕೂ ಪೈರಸಿ ಕಾಟ ಶುರುವಾಗಿದೆ. ಪೈರಸಿ ಬಗ್ಗೆ ನಟ ಕಿಚ್ಚ ಸುದೀಪ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಿಚ್ಚ ಸುದೀಪ್, ಪೈರಸಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾವು 4 ಸಾವಿರ ಪೈರಸಿ ಲಿಂಕ್ ಡಿಲಿಟ್ ಮಾಡಿದ್ದೇವೆ. ಫಸ್ಟ್ ಡೇ, ಸೆಕೆಂಡ್ ಡೇ ಸೇರಿಸಿ 4 ಸಾವಿರ ಲಿಂಕ್ ಗಳನ್ನು ಡಿಲಿಟ್ ಮಾಡಿದೇವೆ ಎಂದು ತಿಳಿಸಿದ್ದಾರೆ.
ಒಟ್ಟಾರೆ ಈವರೆಗೆ 9000 ಲಿಂಕ್ ಗಳನ್ನು ತೆಗೆಸಿದ್ದೇವೆ. ಪೈರಸಿ ಇತ್ತು. ಈಗ ಚಾಲೇಂಜ್ ಹಾಕಿಕೊಂಡು ಮಾಡಿದ್ದಾರೆ. ಕಳೆದ ಬಾರಿಯೂ ಕೆಲವು ವ್ಯಕ್ತಿಗಳನ್ನು ಹಿಡಿದು ಬಿಟ್ಟಿದ್ದೆವು. ಆದರೆ ಈಬಾರಿ ಬಿಡುವ ಮಾತೇ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

