HomeIndiaಕೇರಳ ವಿಧಾನಸಭೆ ಚುನಾವಣೆ 2026: ಸಿಎಂ ಪಿಣರಾಯಿ ವಿಜಯನ್ ಸ್ಪರ್ಧೆ ಇಲ್ಲ?

ಕೇರಳ ವಿಧಾನಸಭೆ ಚುನಾವಣೆ 2026: ಸಿಎಂ ಪಿಣರಾಯಿ ವಿಜಯನ್ ಸ್ಪರ್ಧೆ ಇಲ್ಲ?

ಕೇರಳ ವಿಧಾನಸಭೆ ಚುನಾವಣೆ 2026ರ ತಯಾರಿಯ ನಡುವೆಯೇ ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ.ಬೇಬಿ ಮಾಡಿದ ಘೋಷಣೆಯೊಂದು ಚರ್ಚೆಗೆ ಕಾರಣವಾಗಿದೆ. ಮುಂಬರುವ ಚುನಾವಣೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ‘ಪ್ರಚಾರ ನಾಯಕ’ ನಾಯಕರಾಗಲಿದ್ದಾರೆ ಎಂದು ಹೇಳಿದ್ದಾರೆ.

ಇದು ಪಕ್ಷದ ಹಳೆ ರಾಜಕೀಯ ಸೂತ್ರಗಳ ಕುರಿತು ನಾಯಕರು ಗಮನ ಹರಿಸಿ, ಚರ್ಚಿಸಲು ಕಾರಣವಾಗಿದೆ.  2006ರಲ್ಲಿ ವಿ.ಎಸ್.ಅಚ್ಯುತಾನಂದನ್ ಇದೇ ‘ಪ್ರಚಾರ ನಾಯಕ’ ಪಟ್ಟವನ್ನು ಅಲಂಕರಿಸಿದ್ದರು. ಈಗ ಪಿಣರಾಯಿ ವಿಜಯನ್ ಅವರನ್ನು ಪ್ರಚಾರ ನಾಯಕ ಎಂದು ಉಲ್ಲೇಖಿಸಿದ್ದು, ಪಕ್ಷದೊಳಗಿನ ಹಳೆಯ ರಾಜಕೀಯ ತಂತ್ರದ ಪುನರುಜ್ಜೀವನವೇ? ಎಂದು ಚರ್ಚಿಸಲಾಗುತ್ತಿದೆ.

ಪಕ್ಷದ ಆಂತರಿಕ ಅಸಮಾಧಾನದ ಅವಧಿಯಲ್ಲಿ 2006ರಲ್ಲಿ ವಿ.ಎಸ್.ಅಚ್ಯುತಾನಂದನ್ ಅವರನ್ನು ಪ್ರಚಾರ ನಾಯಕರ ಎಂದು ಘೋಷಣೆ ಮಾಡಲಾಯಿತು. ಆ ಸಮಯದಲ್ಲಿ, ಪಕ್ಷವು ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿಗೆ ಟಿಕೆಟ್ ನಿರಾಕರಿಸಲು ನಿರ್ಧರಿಸಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆ ಬಳಿಕ ಈ ತೀರ್ಮಾನದ ವಿರುದ್ಧ ಪ್ರತಿಭಟನೆಗಳು ನಡೆದವು. ಆಗ ಪಕ್ಷದ ಸಭೆಯಲ್ಲಿ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಲಾಯಿತು ಮತ್ತು ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕಾಯಿತು. ಪಕ್ಷದಲ್ಲಿ ‘ಪ್ರಚಾರ ನಾಯಕ’ ಎಂದು ಬಿಂಬಿಸುವುದು ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಸಂಕೇತ ಎಂಬ ಮಾತಿದೆ.

ಈಗ ಹಾಲಿ ಕೇರಳ ಸಿಎಂ ಆಗಿರುವ ಪಿಣರಾಯಿ ವಿಜಯನ್ ಅವರನ್ನು ಪ್ರಚಾರ ನಾಯಕ ಎಂದು ಘೋಷಣೆ ಮಾಡಿದ್ದು, ಅವರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲವೇ? ಎಂಬ ಚರ್ಚೆಯನ್ನು ಹುಟ್ಟುಹಾಕುವಂತೆ ಮಾಡಿದೆ.

ಸಾಮಾನ್ಯವಾಗಿ ಪಕ್ಷದ ಕಾರ್ಯದರ್ಶಿಗಳು ಚುನಾವಣಾ ಕಣಕ್ಕೆ ಇಳಿಯುವುದಿಲ್ಲ ಎಂಬುದು ವಾದವಾಗಿದೆ. ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಕಾರಣಕ್ಕೆ 2007ರ ಮೇ ತಿಂಗಳಲ್ಲಿ ವಿ.ಎಸ್.ಅತ್ಯುತಾನಂದನ್ ಮತ್ತು ಪಿಣರಾಯಿ ವಿಜಯನ್ ಇಬ್ಬರನ್ನೂ ಪಾಲಿಟ್ ಬ್ಯೂರೋದಿಂದ ಅಮಾನತುಗೊಳಿಸಲಾಗಿತ್ತು, ಕೆಲವು ತಿಂಗಳುಗಳ ನಂತರ, ಇಬ್ಬರನ್ನೂ ಪುನಃ ಸೇರ್ಪಡೆ ಮಾಡಲಾಗಿತ್ತು.

2009ರಲ್ಲಿಯೂ ವಿ.ಎಸ್.ಅತ್ಯುತಾನಂದನ್ ಅವರನ್ನು ಪಾಲಿಟ್ ಬ್ಯೂರೋದಿಂದ ಹೊರ ಹಾಕಲಾಗಿತ್ತು. ಅವರು ಕೇಂದ್ರ ಸಮಿತಿಯ ಸದಸ್ಯರಲ್ಲದಿದ್ದರೂ ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 2011ರ ಚುನಾವಣೆಗೆ ಮೊದಲು ರಾಜ್ಯ ಘಟಕ ಅವರಿಗೆ ಮತ್ತೊಮ್ಮೆ ಟಿಕೆಟ್ ನಿರಾಕರಿಸಲು ನಿರ್ಧರಿಸಿತ್ತು. ನಂತರ ಪಾಲಿಟ್ ಬ್ಯೂರೋದ ಮಧ್ಯಪ್ರವೇಶದ ನಂತರ ಈ ನಿರ್ಧಾರ ರದ್ದಾಯಿತು.

2016ರಲ್ಲಿಯೂ ವಿ.ಎಸ್.ಅತ್ಯುತಾನಂದನ್ ಮತ್ತು ಪಿಣರಾಯಿ ಇಬ್ಬರೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಪಕ್ಷವು ಘೋಷಣೆ ಮಾಡಿತು. ಟಿಕೆಟ್ ನಿರಾಕರಿಸಿದರೆ ಅವರು ಪ್ರಚಾರ ಮಾಡುವುದಿಲ್ಲ ಎಂಬ ಸುದ್ದಿಯೂ ಇತ್ತು. ಆಗ ಸೀತಾರಾಮ್ ಯೆಚೂರಿ ಅವರು, “ಜನರು ಮೊದಲು ನಿರ್ಧರಿಸಲಿ ಮತ್ತು ಆಗ ಮಾತ್ರ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಪ್ರಶ್ನೆಯ ಬಗ್ಗೆ ಚರ್ಚೆ ಮಾಡೋಣ” ಎಂದು ಹೇಳಿದ್ದರು.

ಮುಖ್ಯಮಂತ್ರಿ ಅಭ್ಯರ್ಥಿ ಎಂದು ಯಾವ ನಾಯಕನನ್ನು ಘೋಷಣೆ ಮಾಡುವುದು ಬೇಡ ಎಂಬ ಚರ್ಚೆ ಪಕ್ಷದಲ್ಲಿ ಪದೇ ಪದೇ ನಡೆಯುತ್ತಲೇ ಇದೆ. ಈಗ 2026ರ ಕೇರಳ ಚುನಾವಣೆ ಸಂದರ್ಭದಲ್ಲಿಯೂ ಇದೇ ಚರ್ಚೆ ಪುನಃ ಕೇಳಿ ಬಂದಿದೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸುವ ಅಗತ್ಯವಿಲ್ಲ ಎಂದು ಪಕ್ಷವು ಪದೇ ಪದೇ ಹೇಳುತ್ತಿದ್ದರೂ, ಈ ನಿರ್ಧಾರವು ಅಂತಿಮವಾಗಿ ರಾಜ್ಯ ನಾಯಕತ್ವದ ಮೇಲೆ ಅವಲಂಬಿತವಾಗಿದೆ ಎಂದು ಕೇಂದ್ರ ಸಮಿತಿ ಹೇಳಿದೆ.

ಕೇರಳದ ಪ್ರಸ್ತುತ ರಾಜಕೀಯ ಸಮೀಕರಣಗಳ ಹಿನ್ನೆಲೆಯಲ್ಲಿ ಪಿಣರಾಯಿ ವಿಜಯನ್ ಚುನಾವಣೆಯಲ್ಲಿ ಸ್ಪರ್ಧಿಸಬೇಕೇ ಅಥವಾ ಪ್ರಚಾರ ನಾಯಕರಾಗಿ ಮಾತ್ರ ಉಳಿಯಬೇಕೇ? ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular