ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪ್ರವೀಣ್ ಕಸ್ವಾನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ವನ್ಯಜೀವಿ ಜಗತ್ತಿನ ಸುಂದರ ಕ್ಷಣಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.
ಭಾರತ ವೈವಿಧ್ಯಮಯ ವನ್ಯ ಸಂಕುಲದ ಪರಿಚಯ ಮಾಡಿಸುತ್ತಾ ಸಾಗುವ ಪ್ರವೀಣ್ ಈ ಬಾರಿ ಮಿಂಚುಳ್ಳಿಯ (ಕಿಂಗ್‌ಫಿಶರ್) ಚಿತ್ರವೊಂದನ್ನು ಶೇರ್ ಮಾಡಿದ್ದಾರೆ. ನೀಲಿ ಹಾಗೂ ಕೇಸರಿ ಬಣ್ಣದ ಕಿಂಗ್‌ಫಿಶರ್ ಒಂದು ಮರದ ಕೊಂಬೆ ಮೇಲೆ ಕುಳಿತು ತನ್ನ ಊಟ ಸವಿಯುತ್ತಿರುವುದನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ.
“ಮೀನುಗಾರರ ರಾಜ. ಕಿಂಗ್‌ಫಿಶರ್ ತನ್ನ ಭೋಜನ ಸವಿಯುತ್ತಿದೆ,” ಎಂದು ಕ್ಯಾಪ್ಷನ್ ಕೊಟ್ಟು ಈ ಚಿತ್ರವನ್ನು ಶೇರ್ ಮಾಡಿದ್ದಾರೆ ಪ್ರವೀಣ್. ಫೋಟೊ ತೆಗೆದ ಸ್ಥಳವನ್ನು ನಮೂದಿಸಿಲ್ಲ.
ಈ ಚಿತ್ರಕ್ಕೆ ನೆಟ್ಟಿಗರಿಂದ ಮೆಚ್ಚುಗೆಗಳು ವ್ಯಕ್ತವಾಗಿದೆ. “ಸುಂದರ !” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
The king among fishers. A common #kingfisher enjoying his meal. pic.twitter.com/vQKU2vs0UK
— Parveen Kaswan, IFS (@ParveenKaswan) March 24, 2023
good photography
— 𝕁𝕠𝕗𝕖𝕣𝕥 𝕊𝕒𝕞 (@joferts) March 24, 2023
The king among fishers. A common #kingfisher enjoying his meal. pic.twitter.com/vQKU2vs0UK
— Parveen Kaswan, IFS (@ParveenKaswan) March 24, 2023

