HomeBusinessPF ಖಾತೆದಾರರಿಗೆ ₹15,000 ಲಾಭ; ಈ ಕೆಲಸ ಮಾಡಿದ್ರೆ ಹಣ ನಿಮ್ಮ ಖಾತೆಗೆ

PF ಖಾತೆದಾರರಿಗೆ ₹15,000 ಲಾಭ; ಈ ಕೆಲಸ ಮಾಡಿದ್ರೆ ಹಣ ನಿಮ್ಮ ಖಾತೆಗೆ

ಹೊಸದಾಗಿ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ಇಪಿಎಫ್‌ಒ (EPFO) ಮಹತ್ವದ ಸೂಚನೆ ನೀಡಿದೆ. ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆಯಡಿ ₹15,000 ಹಣ ಪಡೆಯಲು ಕೆಲವು ಕೆಲಸಗಳನ್ನು ಕಡ್ಡಾಯವಾಗಿ ಮಾಡಬೇಕು. ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಯೋಜನೆಯ ಹಣ ಸಿಗದೇ ಹೋಗಬಹುದು.

ಹೊಸದಾಗಿ ಉದ್ಯೋಗಕ್ಕೆ ಸೇರಿದವರು ತಮ್ಮ ಪಿಎಫ್‌ ಖಾತೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿಕೊಳ್ಳಬೇಕು. ಆ ಖಾತೆಯಲ್ಲಿ ಡಿಬಿಟಿ (DBT) ಸೌಲಭ್ಯ ಇರಬೇಕು. ಜೊತೆಗೆ ಎನ್‌ಪಿಸಿಐ (NPCI) ಮ್ಯಾಪಿಂಗ್ ಕೂಡ ಪೂರ್ಣಗೊಂಡಿರಬೇಕು.

₹15,000 ಹೇಗೆ ಸಿಗುತ್ತದೆ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಸದಾಗಿ ಉದ್ಯೋಗಕ್ಕೆ ಸೇರುವವರಿಗೆ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಅರ್ಹ ಉದ್ಯೋಗಿಗಳಿಗೆ ಒಟ್ಟು ₹15,000 ಹಣ ಸಿಗುತ್ತದೆ.

ಈ ಹಣ ಒಂದೇ ಬಾರಿಗೆ ಖಾತೆಗೆ ಬರುವುದಿಲ್ಲ. ಎರಡು ಹಂತಗಳಲ್ಲಿ ಜಮೆಯಾಗುತ್ತದೆ. ಮೊದಲ ಹಂತದಲ್ಲಿ ₹8,000 ಹಾಗೂ ಎರಡನೇ ಹಂತದಲ್ಲಿ ₹7,000 ಹಣ ಸಿಗಲಿದೆ.

ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಕಂಪನಿಗಳಿಗೂ ಈ ಯೋಜನೆಯಡಿ ಪ್ರೋತ್ಸಾಹಧನ ನೀಡಲಾಗುತ್ತದೆ. ಪ್ರತಿ ಉದ್ಯೋಗಿಗೆ ಗರಿಷ್ಠ ₹3,000 ವರೆಗೆ ಸಂಸ್ಥೆಗೆ ನೆರವು ಸಿಗಲಿದೆ.

ಹೊಸದಾಗಿ ಕೆಲಸಕ್ಕೆ ಸೇರಿದವರು ಏನು ಮಾಡಬೇಕು?

ಯೋಜನೆಯ ಲಾಭ ಪಡೆಯಲು ಪಿಎಫ್‌ ವ್ಯಾಪ್ತಿಗೆ ಬರುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರಬೇಕು. ಪಿಎಫ್‌ ಖಾತೆ ಹೊಂದಿರುವುದರ ಜೊತೆಗೆ ಯುಎಎನ್‌ (UAN) ಕೂಡ ಸಕ್ರಿಯವಾಗಿರಬೇಕು.

ಯುಎಎನ್‌ ಸಕ್ರಿಯಗೊಳಿಸಲು ಫೇಸ್‌ ಅಥೆಂಟಿಕೇಷನ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಇದರ ಜೊತೆಗೆ ಪಿಎಫ್‌ ಖಾತೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯಲ್ಲಿ ಡಿಬಿಟಿ ಸೌಲಭ್ಯ ಇದೆಯೇ ಎಂದು ಪರಿಶೀಲಿಸಬೇಕು.

ಡಿಬಿಟಿ ಸೌಲಭ್ಯ ಇಲ್ಲದಿದ್ದರೆ ಬ್ಯಾಂಕ್ ಖಾತೆಯ ವಿವರಗಳನ್ನು ಸರಿಪಡಿಸಿಕೊಳ್ಳಬೇಕು. ಎನ್‌ಪಿಸಿಐ ಮ್ಯಾಪಿಂಗ್ ಕೂಡ ಸರಿಯಾಗಿರಬೇಕು.ಈ ಕೆಲಸಗಳು ಪೂರ್ಣವಾಗಿದ್ದರೆ ಮಾತ್ರ ಯೋಜನೆಯ ಹಣ ಖಾತೆಗೆ ಬರುವ ಪ್ರಕ್ರಿಯೆ ಸುಗಮವಾಗುತ್ತದೆ.

https://x.com/officialepfo/status/2097184252215640236

ಯೋಜನೆಯಡಿ ಕೆಲಸಕ್ಕೆ ಸೇರಿದ ಮೊದಲ ವರ್ಷದಲ್ಲೇ ಅರ್ಹ ಉದ್ಯೋಗಿಗಳಿಗೆ ಹಣ ಸಿಗಲಿದೆ. ₹1 ಲಕ್ಷದೊಳಗಿನ ಮಾಸಿಕ ವೇತನ ಪಡೆಯುವ ಉದ್ಯೋಗಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ ಎಂದು ತಿಳಿಸಲಾಗಿದೆ.

ಇದಕ್ಕಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಪಿಎಫ್‌ ಖಾತೆ ಹೊಂದಿದ್ದು, ಸತತ ಆರು ತಿಂಗಳ ಕಾಲ ಪಿಎಫ್‌ ಹಣ ಜಮೆಯಾಗಿದ್ದರೆ ಅರ್ಹ ಉದ್ಯೋಗಿಗಳಿಗೆ ಎರಡು ಹಂತಗಳಲ್ಲಿ ಹಣ ಖಾತೆಗೆ ಜಮೆಯಾಗಲಿದೆ.

ಆದ್ದರಿಂದ ಹೊಸದಾಗಿ ಕೆಲಸಕ್ಕೆ ಸೇರಿದವರು ತಮ್ಮ UAN ಸಕ್ರಿಯವಾಗಿದೆಯೇ, ಬ್ಯಾಂಕ್ ಖಾತೆಗೆ DBT ಸೌಲಭ್ಯ ಇದೆಯೇ ಮತ್ತು NPCI ಮ್ಯಾಪಿಂಗ್ ಪೂರ್ಣಗೊಂಡಿದೆಯೇ ಎಂಬುದನ್ನು ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular