HomeKarnatakaಮೈಸೂರಿನಲ್ಲಿ ನನ್ನ ಮೇಲೆ ಬಿಜೆಪಿ ವತಿಯಿಂದ ವೈಯಕ್ತಿಕ ದಾಳಿಗಳು ನಡೆಯುತ್ತಿವೆ ; ನಟ ಚೇತನ್ ಅಹಿಂಸಾ

ಮೈಸೂರಿನಲ್ಲಿ ನನ್ನ ಮೇಲೆ ಬಿಜೆಪಿ ವತಿಯಿಂದ ವೈಯಕ್ತಿಕ ದಾಳಿಗಳು ನಡೆಯುತ್ತಿವೆ ; ನಟ ಚೇತನ್ ಅಹಿಂಸಾ

ಮೈಸೂರಿನಲ್ಲಿ ನನ್ನ ಮೇಲೆ ಬಿಜೆಪಿ ವತಿಯಿಂದ ವೈಯಕ್ತಿಕ ದಾಳಿಗಳು ನಡೆಯುತ್ತಿವೆ  ಎಂದು ನಟ ಚೇತನ್ ಅಹಿಂಸಾ ಕಿಡಿಕಾರಿದ್ದಾರೆ.ನನ್ನ ವಿರುದ್ಧ ವೈಯಕ್ತಿಕ ದಾಳಿ ನಡೆಸುವುದನ್ನು ಬಿಟ್ಟು, ಸ್ಮಾರಕಗಳ ವಿಚಾರದಲ್ಲಿ ಬಿಜೆಪಿ ಮೊದಲು ತನ್ನ ನಿಲುವನ್ನು ಸ್ಪಷ್ಟಪಡಿಸಲಿ,” ಎಂದು ಬಹುಭಾಷಾ ನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಬಿಜೆಪಿ ನಾಯಕರ ಸರಣಿ ಟೀಕೆಗಳ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಕೇಸರಿ ಪಡೆಗೆ ನೇರ ಪ್ರಶ್ನೆಗಳನ್ನು ಎಸೆದಿದ್ದಾರೆ.

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ಅವರು “ನನ್ನ ವಿರುದ್ಧ ವೈಯಕ್ತಿಕ ದಾಳಿ ನಡೆಸುತ್ತಿರುವ ಬಿಜೆಪಿ ಮೊದಲು ತನ್ನ ನಿಲುವನ್ನು ಸ್ಪಷ್ಟಪಡಿಸಲಿ,” ಆಕ್ರೋಶ ಹೊರಹಾಕಿದ್ದಾರೆ.

ಮೈಸೂರುದಲ್ಲಿ ನನ್ನ ಮೇಲೆ ಬಿಜೆಪಿ ವತಿಯಿಂದ ವೈಯಕ್ತಿಕ ದಾಳಿಗಳು ನಡೆಯುತ್ತಿವೆ.ಮುಖ್ಯವಾಗಿ, ಈ ‘ಸ್ಮಾರಕ ಪಾಲಿಟಿಕ್ಸ್’ ವಿಷಯದ ಬಗ್ಗೆ ಬಿಜೆಪಿ ಪಕ್ಷದ ನಿಲುವು ಏನು?ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2006ರಲ್ಲಿ (ರಾಜ್‌ಕುಮಾರ್ ನಿಧನದ ಸಮಯದಲ್ಲಿ) ಮೈತ್ರಿ ಸರ್ಕಾರದಲ್ಲಿದ್ದರು, 2009ರಲ್ಲಿ (ವಿಷ್ಣುವರ್ಧನ್ ನಿಧನದ ಸಮಯದಲ್ಲಿ) ಮುಖ್ಯಮಂತ್ರಿಯಾಗಿದ್ದರು, ಮತ್ತು 2020ರಲ್ಲಿ ಅಂಬರೀಶ್ ಸ್ಮಾರಕಕ್ಕೆ ನಿಧಿ ನೀಡಿದ್ದರು. ಈಗ ಬಿಜೆಪಿ ವಿಜಯೇಂದ್ರ ಅವರ ನಿಲುವು ಏನು? ಎಂದು ಪ್ರಶ್ನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular