HomeKarnatakaBIG UPDATE: ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ; ಮೃತ ಮೂರನೇ ವ್ಯಕ್ತಿಯ ಗುರುತು ಪತ್ತೆ

BIG UPDATE: ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ; ಮೃತ ಮೂರನೇ ವ್ಯಕ್ತಿಯ ಗುರುತು ಪತ್ತೆ

ಬೆಂಗಳೂರು: ಬೆಂಗಳೂರಿನ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತದಲ್ಲಿ ಮೂವರು ಮೃತಪಟ್ಟಿದ್ದು, ಇದೀಗ ಮೂರನೇ ವ್ಯಕ್ತಿಯ ಗುರುತು ಪತ್ತೆಯಾಗಿದೆ.

ಬೆಂಗಳೂರಿನ ಕುಂಬಳಗೋಡು ಬಳಿಯ ರಾಮಸಂದ್ರದಲ್ಲಿ ನಿನ್ನೆ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ದುರಂತದಲ್ಲಿ ಮೂವರು ಸಾವನ್ನಪ್ಪಿದ್ದರು. ಮೃತರಲ್ಲಿ ಇಬ್ಬರ ಗುರುತು ಪತ್ತೆಯಾಗಿತ್ತು. ಓರ್ವನ ಗುರುತು ಸಿಕ್ಕಿರಲಿಲ್ಲ. ಇದೀಗ ಮೂರನೇ ವ್ಯಕ್ತಿಯ ಗುರುತು ಪತ್ತೆಯಾಗಿದೆ.

14 ವರ್ಷದ ಬಾಲಕ ಅರ್ಬಾಜ್ ಮೃತ ಪಟ್ಟಿದ್ದು, ದಿನಕ್ಕೆ 500 ರೂಪಾಯಿ ದಿನಗೂಲಿಗಾಗಿ ಕೆಲಸಕ್ಕೆ ಸೇರಿದ್ದ. ಇನ್ನು ಅಗ್ನಿ ದುರಂತದಲ್ಲಿ ಗೋಡೌನ್ ಮಾಲೀಕ ಸಲಿಂ (50) ಹಾಗೂ ನಾಯಂಡಹಳ್ಳಿ ನಿವಾಸಿ ಚಾಲಕ ಮೆಹಬೂಬ್ (35) ಕೂಡ ಮೃತಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆಯಲ್ಲಿ 6 ಜನ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಓರ್ವ 10 ವರ್ಷದ ಬಾಲಕ ಕೂಡ ಇದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣ ಸಂಬಂಧ ಕುಂಬಳಗೋಡು ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ಕೇಸ್ ದಾಖಲಾಗುತ್ತಿದ್ದಂತೆ ಜಾಗದ ಮಾಲೀಕ ವಿಠ್ಠಲ್ ಪರಾರಿಯಾಗಿದ್ದಾನೆ.

For Latest News Updates, Join Our Whatsapp Community🚩
RELATED ARTICLES

Most Popular