ಬಳ್ಳಾರಿ: ಬಳ್ಳಾರಿಯ ಗುಗ್ಗರಹಟ್ಟಿಯಲ್ಲಿ ಪತ್ನಿ, ಮಾವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬ ಕೊಲೆ ಮಾಡಿದ್ದಾನೆ. ನಾಗಲಕ್ಷ್ಮಿ(24) ಮತ್ತು ಶ್ರೀನಿವಾಸ್(48) ಕೊಲೆಯಾದವರು,
ಪತ್ನಿಯ ಮೇಲಿನ ಅನುಮಾನದಿಂದ ಆರೋಪಿ ತೇಜು ಕೃತ್ಯವೆಸಗಿದ್ದಾನೆ. ತಂದೆ ಗುರುಶಂಕರ್ ಜೊತೆಗೆ ಸೇರಿ ಪತ್ನಿ ಮತ್ತು ಮಾವನನ್ನು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಆರೋಪಿಗಳು ಶವದ ಮುಂದೆ ಕುಳಿತುಕೊಂಡಿದ್ದರು. ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕುಟುಂಬ ಕಲಹ ಬಗೆಹರಿಸುವ ನೆಪದಲ್ಲಿ ಮಾತುಕತೆಗೆಂದು ಪತ್ನಿ, ಮಾವನನ್ನು ಮನೆಗೆ ಕರೆಸಿಕೊಂಡ ತೇಜು ತನ್ನ ತಂದೆ ಜತೆ ಸೇರಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪತ್ನಿಯ ಮೇಲೆ ಪತಿ ತೇಜು ಅನುಮಾನ ಹೊಂದಿದ್ದ. ಕುಟುಂಬದ ಸಮಸ್ಯೆ ಬಗ್ಗೆ ಮಾತುಕತೆ ನಡೆಸಬೇಕೆಂದು ತವರಿನಿಂದ ಪತ್ನಿ ಮತ್ತು ಮಾವನನ್ನು ಆರೋಪಿ ತನ್ನ ಮನೆಗೆ ಕರೆಸಿಕೊಂಡಿದ್ದಾನೆ. ಈ ವೇಳೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಇಬ್ಬರನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

