HomeKarnatakaBIG NEWS: ಪೆನ್ ಡ್ರೈವ್ ಹಂಚಿಕೆಯಲ್ಲಿ ಎಲ್.ಆರ್.ಶಿವರಾಮೇಗೌಡ ಒಬ್ಬ ಏಜೆಂಟ್; ಆತನಿಗೆ 5 ಕೋಟಿ ಕೊಡಲಾಗಿದೆ;...

BIG NEWS: ಪೆನ್ ಡ್ರೈವ್ ಹಂಚಿಕೆಯಲ್ಲಿ ಎಲ್.ಆರ್.ಶಿವರಾಮೇಗೌಡ ಒಬ್ಬ ಏಜೆಂಟ್; ಆತನಿಗೆ 5 ಕೋಟಿ ಕೊಡಲಾಗಿದೆ; ಮಾಜಿ ಶಾಸಕ ಸುರೇಶ್ ಗೌಡ ಆರೋಪ

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಪೆನ್ ಡ್ರೈವ್ ಹಂಚಿಕೆಗಾಗಿ ಹತ್ತಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಗೌಡ, ಪೆನ್ ಡ್ರೈವ್ ಹಂಚಿಕೆಗಾಗಿ ಎಲ್.ಆರ್.ಶಿವರಾಮೇಗೌಡಗೆ 5 ಕೋಟಿ ರೂಪಾಯಿಗಳನ್ನು ಕಾಂಗ್ರೆಸ್ ಪ್ರಭಾವಿ ನಾಯಕ ಕೊಟ್ಟಿದ್ದಾರೆ. ಶಿವರಾಮೇಗೌಡ ಪೆನ್ ಡ್ರೈವ್ ಹಂಕಿಯ ಒಬ್ಬ ಏಜೆಂಟ್ ಎಂದು ಹೇಳಿದ್ದಾರೆ.

ಮಾಜಿ ಸಿಎಂ ಹೆಚ್.ಡಿಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಗೆ 15 ದಿನ ಮೊದಲು ಶಿವರಾಮೇಗೌಡಗೆ ಹಣ ವರ್ಗಾವಣೆಯಾಗಿದೆ. ಆರಂಭದಲ್ಲಿ ಆ ವಿಚಾರ ಕೇಳಿದಾಗ ನನಗೂ ಅನುಮಾನ ಮೂಡಿತು. ಆ ವ್ಯಕ್ತಿ ಅಷ್ಟು ಬೆಲೆ ಬಾಳಲ್ಲ, ಯಾಕೆ ಅಷ್ಟು ಹಣ ಕೊಟ್ಟಿದ್ದಾರೆ ಎಂದು? ಈಗ ಸಂಶಯ ನಿಜವಾಗಿದೆ ಎಂದು ಸುರೇಶ್ ಗೌಡ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular