HomeEntertainment'ಪೆಡ್ಡಿ' ಚಿತ್ರದ ಹೆಲ್ಲಲ್ಲಲ್ಲೋ ಸಾಂಗ್ ಪ್ರೋಮೋ ರಿಲೀಸ್:ರಾಮ್ ಚರಣ್ ಮತ್ತು ಶ್ರುತಿ ಹಾಸನ್ ಸ್ಟೆಪ್ಸ್‌ಗೆ ಫ್ಯಾನ್ಸ್...

‘ಪೆಡ್ಡಿ’ ಚಿತ್ರದ ಹೆಲ್ಲಲ್ಲಲ್ಲೋ ಸಾಂಗ್ ಪ್ರೋಮೋ ರಿಲೀಸ್:ರಾಮ್ ಚರಣ್ ಮತ್ತು ಶ್ರುತಿ ಹಾಸನ್ ಸ್ಟೆಪ್ಸ್‌ಗೆ ಫ್ಯಾನ್ಸ್ ಫಿದಾ

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ಪೆದ್ದಿ ಚಲನಚಿತ್ರದ ವಿಶೇಷ ಹಾಡೊಂದರ ಪ್ರೋಮೋ ಇದೀಗ ಹೊರಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಬುಚ್ಚಿ ಬಾಬು ಸನಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಗ್ರಾಮೀಣ ಹಿನ್ನೆಲೆಯ ಕ್ರೀಡಾ ಆಧಾರಿತ ಸಿನಿಮಾದ ಪ್ರಕಟಣೆ ಆದಾಗಿನಿಂದಲೂ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಇದೀಗ ಚಿತ್ರತಂಡವು ಶ್ರುತಿ ಹಾಸನ್ ಕಾಣಿಸಿಕೊಂಡಿರುವ ಹೆಲ್ಲಲ್ಲಲ್ಲೋ ಎಂಬ ಮಾಸ್ ಹಾಡಿನ ಪ್ರೋಮೋವನ್ನು ಹಂಚಿಕೊಂಡಿದೆ.

ಈ ಸಣ್ಣ ಪ್ರೋಮೋ ವಿಡಿಯೋದಲ್ಲಿ ರಾಮ್ ಚರಣ್, ಶ್ರುತಿ ಹಾಸನ್ ಮತ್ತು ಜಾನ್ವಿ ಕಪೂರ್ ಅವರ ಅತ್ಯಂತ ಶಕ್ತಿಶಾಲಿ ಹಾಗೂ ಆಕರ್ಷಕ ನೃತ್ಯದ ಜಲಕ್ ಕಾಣಿಸಿಕೊಂಡಿದ್ದು, ಇದೊಂದು ಪಕ್ಕಾ ಕಮರ್ಷಿಯಲ್ ಹಾಡು ಎಂಬುದನ್ನು ಸಾಬೀತುಪಡಿಸಿದೆ. ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್ ಅವರ ವೇಗದ ಲಯದ ಸಂಗೀತ ಸಂಯೋಜನೆಗೆ ಅನಂತ ಶ್ರೀರಾಮ್ ಸಾಹಿತ್ಯ ಬರೆದಿದ್ದು, ರಕ್ಷಿತಾ ಸುರೇಶ್ ಧ್ವನಿಯಾಗಿದ್ದಾರೆ. ಈ ಪೂರ್ಣ ಪ್ರಮಾಣದ ಹಾಡನ್ನು ಭೋಪಾಲ್ ನಲ್ಲಿ ಆಯೋಜಿಸಲಾಗಿರುವ ಅದ್ಧೂರಿ ಸಂಗೀತ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಭಾರಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಕನ್ನಡದ ಹೆಮ್ಮೆ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ದಿವ್ಯೇಂದು ಶರ್ಮಾ, ಜಗಪತಿ ಬಾಬು ಹಾಗೂ ಬೊಮನ್ ಇರಾನಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ವೃದ್ಧಿ ಸಿನಿಮಾಸ್ ಸಂಸ್ಥೆ ನಿರ್ಮಿಸುತ್ತಿರುವ ಈ ಮನರಂಜನಾತ್ಮಕ ಸಿನಿಮಾವು ಮುಂದಿನ ತಿಂಗಳು ಅಂದರೆ ಜೂನ್ ನಾಲ್ಕರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular