ಚಳಿಗಾಲದಲ್ಲಿ ಕೂದಲು, ಚರ್ಮದ ಆರೈಕೆಗೆ ಬೆಸ್ಟ್ ಕಡಲೆಕಾಯಿ

ಈಗಿನ ಜೀವನಶೈಲಿ ಹಾಗೂ ವಾಯು ಮಾಲಿನ್ಯ ಎಲ್ಲರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಚರ್ಮ ಹಾಗೂ ಕೂದಲಿಗೆ ಸಾಕಷ್ಟು ಹಾನಿಯುಂಟಾಗ್ತಿದೆ. ಚಳಿಗಾಲದಲ್ಲಿ ಕೂದಲು ಉದುರುವುದು ಸಾಮಾನ್ಯ. ಚಳಿಗಾಲ ಪ್ರಾರಂಭವಾಗ್ತಿದ್ದಂತೆ ಮಾರುಕಟ್ಟೆಯಲ್ಲಿ ಕಡಲೆಕಾಯಿ ಅಬ್ಬರ ಶುರುವಾಗುತ್ತದೆ.

ಕಡಲೆಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅನೇಕ ರೋಗಗಳಿಂದ ಇದು ರಕ್ಷಣೆ ನೀಡುತ್ತದೆ. ಆರೋಗ್ಯಕರ ಕೂದಲು, ಹೊಳೆಯುವ ಚರ್ಮ ಹಾಗೂ ಹಾರ್ಮೋನ್ ಸಮತೋಲನದಲ್ಲಿರಬೇಕೆನ್ನುವವರು ಕಡಲೆಕಾಯಿ ಸೇವನೆ ಮಾಡಬೇಕು.

ಕಡಲೆಕಾಯಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿಡುವ ಕೆಲಸ ಮಾಡುತ್ತದೆ.

ಬೇಯಿಸಿದ ಕಡಲೆಕಾಯಿ ಉತ್ಕರ್ಷಣ ನಿರೋಧಕ ಶಕ್ತಿ ಹೊಂದಿರುತ್ತದೆ. ಹುರಿದ ಕಡಲೆಕಾಯಿ ಕೂಡ ಒಳ್ಳೆಯದು. ಹೊಳೆಯುವ ಚರ್ಮಕ್ಕೆ ಕಡಲೆಕಾಯಿ ಬೆಸ್ಟ್.

ಕಡಲೆಕಾಯಿಯಲ್ಲಿ ವಿಟಮಿನ್ 6 ಇರುತ್ತದೆ. ಇದು ಸ್ನಾಯುಗಳ ಉರಿಯೂತವನ್ನು ಕಡಿಮೆ ಮಾಡುತ್ತದೆ. ಮನಸ್ಥಿತಿಯನ್ನು ಸುಧಾರಿಸುತ್ತದೆ. ಆಗಾಗ ಮೂಡ್ ಸ್ವಿಂಗ್ ಆಗುವ ಜನರು ಕಡಲೆಕಾಯಿಯನ್ನು ಹೆಚ್ಚಾಗಿ ಸೇವಿಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read