ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಗಾದೆ ಮಾತಿನಂತೆ, ಒಂದು ದೇಶದ ನೈಜ ಚಿತ್ರಣ ಸಿಗುವುದು ಅಲ್ಲಿನ ಜನರ ಜೀವನಶೈಲಿಯನ್ನು ಹತ್ತಿರದಿಂದ ನೋಡಿದಾಗ ಮಾತ್ರ. ಆದರೆ, ಇಂದಿನ ದಿನಗಳಲ್ಲಿ ಒಂದು ದೇಶ ಎಷ್ಟು ಮುಂದುವರಿದಿದೆ ಎಂಬುದನ್ನು ಕೇವಲ ಅಲ್ಲಿನ ಹಣಕಾಸಿನ ಬೆಳವಣಿಗೆ ಅಥವಾ ಜಿಡಿಪಿ (GDP) ಮೇಲೆ ಅಳೆಯಲಾಗುತ್ತಿಲ್ಲ. ಬದಲಾಗಿ, ಅಲ್ಲಿನ ಜನರು ಎಷ್ಟು ಸುರಕ್ಷಿತವಾಗಿದ್ದಾರೆ? ಅವರಿಗೆ ಸಿಗುವ ಆರೋಗ್ಯ ಸೇವೆ ಎಂತದ್ದು? ಮತ್ತು ಅವರ ಉಸಿರಾಡುವ ಗಾಳಿ ಎಷ್ಟು ಶುದ್ಧವಾಗಿದೆ? ಎಂಬ ಅಂಶಗಳ ಮೇಲೆ ಜೀವನಮಟ್ಟದ ಸೂಚ್ಯಂಕವನ್ನು (Quality of Life Index) ನಿರ್ಧರಿಸಲಾಗುತ್ತಿದೆ.
ನಂಬಿಯೋ (Numbeo) ಸಂಸ್ಥೆಯು ಜನರ ಖರೀದಿ ಸಾಮರ್ಥ್ಯ ಮನೆಗಳ ಲಭ್ಯತೆ ಮಾಲಿನ್ಯದ ಮಟ್ಟ ಮತ್ತು ಸಂಚಾರ ದಟ್ಟಣೆಯಂತಹ ಪ್ರಮುಖ ಅಂಶಗಳನ್ನು ಪರಿಗಣಿಸಿ 2026ರ ಸಾಲಿನ ಏಷ್ಯಾದ ಅತ್ಯುತ್ತಮ ದೇಶಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಈ ದೇಶಗಳಿಗೆ ನೀವು ಪ್ರವಾಸ ಹೋದರೆ ಖಂಡಿತವಾಗಿಯೂ ಬೇರೆಯದ್ದೇ ಆದ ಅದ್ಭುತ ಅನುಭವ ನಿಮ್ಮದಾಗಲಿದೆ.
ಏಷ್ಯಾದಲ್ಲಿ ಗುಣಮಟ್ಟದ ಜೀವನಕ್ಕೆ ಹೆಸರಾದ ದೇಶಗಳು ಇಲ್ಲಿವೆ:
ಓಮನ್:ಏಷ್ಯಾದಲ್ಲೇ ಅತ್ಯಂತ ಗುಣಮಟ್ಟದ ಜೀವನವನ್ನು ನಡೆಸುತ್ತಿರುವ ದೇಶಗಳ ಪೈಕಿ ಓಮನ್ ಮೊದಲ ಸ್ಥಾನದಲ್ಲಿದೆ. ಕೇವಲ ಅಂಕಿಅಂಶಗಳಲ್ಲಷ್ಟೇ ಅಲ್ಲದೆ, ಪ್ರಾಯೋಗಿಕವಾಗಿಯೂ ಇಲ್ಲಿನ ಜನರ ಬದುಕು ಅತ್ಯಂತ ಸುಖಕರವಾಗಿದೆ.ರಿಯಲ್ ಎಸ್ಟೇಟ್ ಬೆಲೆಗಳು ಆದಾಯಕ್ಕೆ ಹೋಲಿಸಿದರೆ ಅತಿ ಕಡಿಮೆಯಿರುವುದರಿಂದ, ಇಲ್ಲಿ ಪ್ರತಿಯೊಬ್ಬರೂ ಸ್ವಂತ ಮನೆಯ ಕನಸನ್ನು ಸುಲಭವಾಗಿ ನನಸು ಮಾಡಿಕೊಳ್ಳುತ್ತಾರೆ.ಮಾಲಿನ್ಯದ ಮಟ್ಟವು ತುಂಬಾ ಕಡಿಮೆ ಇರುವುದು ಇಲ್ಲಿನ ನಿವಾಸಿಗಳಿಗೆ ಆರೋಗ್ಯಕರ ಜೀವನ ನೀಡಲು ಸಹಕಾರಿಯಾಗಿದೆ.ಲ್ಲಿನ ಜನರ ಆದಾಯಕ್ಕೆ ಹೋಲಿಸಿದರೆ ಕೊಳ್ಳುವ ಶಕ್ತಿ (Purchasing Power) ಮಾರುಕಟ್ಟೆಯಲ್ಲಿ ತುಂಬಾನೇ ಹೆಚ್ಚಾಗಿದೆ.ಆರೋಗ್ಯ ವ್ಯವಸ್ಥೆ ಸ್ವಲ್ಪ ಸುಧಾರಿಸಬೇಕಿದ್ದರೂ, ಸುರಕ್ಷತೆ ಮತ್ತು ಬೆಲೆಗಳ ವಿಚಾರದಲ್ಲಿ ಓಮನ್ 207.6 ಸ್ಕೋರ್ನೊಂದಿಗೆ ಅಗ್ರಸ್ಥಾನದಲ್ಲಿದೆ.
ಜಪಾನ್:ಜಪಾನ್ ಅಂದ ಕೂಡಲೇ ನಮಗೆ ನೆನಪಾಗುವುದು ಅತಿ ವೇಗದ ತಂತ್ರಜ್ಞಾನ. ಸಾಮಾನ್ಯವಾಗಿ ದೇಶಗಳು ಅಭಿವೃದ್ಧಿ ಹೊಂದಿದಂತೆಲ್ಲಾ ಮಾಲಿನ್ಯವೂ ಹೆಚ್ಚಾಗಿ ಜನರ ನೆಮ್ಮದಿ ಕೆಡುತ್ತದೆ. ಆದರೆ ಜಪಾನ್ನಲ್ಲಿ ಮಾತ್ರ ಇದು ಉಲ್ಟಾ.ಜಪಾನ್ನಲ್ಲಿ ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇದು ಏಷ್ಯಾದಲ್ಲೇ ಅತಿ ಸುರಕ್ಷಿತ ರಾಷ್ಟ್ರಗಳಲ್ಲಿ ಒಂದಾಗಿದೆ.ತನ್ನ ವೇಗದ ಬೆಳವಣಿಗೆ ಮತ್ತು ವ್ಯವಸ್ಥಿತ ಜೀವನಶೈಲಿಯಿಂದಾಗಿ ಜಪಾನ್ ಜೀವನ ಗುಣಮಟ್ಟ ಸೂಚ್ಯಂಕದಲ್ಲಿ 185.6 ಸ್ಕೋರ್ ಪಡೆದು ಉನ್ನತ ಸ್ಥಾನದಲ್ಲಿದೆ.
2026ರ ಸಾಲಿನ ಜೀವನ ಗುಣಮಟ್ಟ ಸೂಚ್ಯಂಕದಲ್ಲಿ ಏಷ್ಯಾದ ಇತರ ದೇಶಗಳ ಸಾಧನೆ ಹೀಗಿದೆ:
ಸೌದಿ ಅರೇಬಿಯಾ: 165.3 ಸ್ಕೋರ್ನೊಂದಿಗೆ ಆರನೇ ಸ್ಥಾನದಲ್ಲಿದೆ.
ಕುವೈತ್: 162 ಸ್ಕೋರ್ ಪಡೆಯುವ ಮೂಲಕ ಏಳನೇ ಸ್ಥಾನದಲ್ಲಿದೆ.
ಸೈಪ್ರಸ್: 159 ಸ್ಕೋರ್ನೊಂದಿಗೆ ಎಂಟನೇ ಸ್ಥಾನವನ್ನು ಅಲಂಕರಿಸಿದೆ.
ಸಿಂಗಾಪುರ: 158.1 ಸ್ಕೋರ್ನೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ.
ತೈವಾನ್: 155 ಸ್ಕೋರ್ ಪಡೆಯುವ ಮೂಲಕ ಹತ್ತನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ
ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿದ್ದರೂ, ಜೀವನಮಟ್ಟದ ಸೂಚ್ಯಂಕದಲ್ಲಿ ಭಾರತ ಇನ್ನೂ ಸಾಕಷ್ಟು ದೂರ ಸಾಗಬೇಕಿದೆ.ನಮ್ಮ ನೆರೆಯ ಚೀನಾ ದೇಶವು 134.8 ಸ್ಕೋರ್ನೊಂದಿಗೆ 14ನೇ ಸ್ಥಾನದಲ್ಲಿದ್ದು, ಭಾರತಕ್ಕಿಂತ ಉತ್ತಮ ಸ್ಥಿತಿಯಲ್ಲಿದೆ.ಈ ಪಟ್ಟಿಯಲ್ಲಿ ಭಾರತ 122.3 ಸ್ಕೋರ್ನೊಂದಿಗೆ 18ನೇ ಸ್ಥಾನದಲ್ಲಿದೆ.
3.ಕತಾರ್:ಗಲ್ಫ್ ರಾಷ್ಟ್ರಗಳಲ್ಲಿ ಜನರ ಆದಾಯದ ಮಟ್ಟ ಗಗನಕ್ಕೇರಿರುತ್ತದೆ. ಅದರಲ್ಲೂ ಕತಾರ್ ತನ್ನ ಕಟ್ಟುನಿಟ್ಟಿನ ಕಾನೂನು ಮತ್ತು ಆರ್ಥಿಕ ಶಕ್ತಿಯಿಂದಾಗಿ ಗಮನ ಸೆಳೆಯುತ್ತಿದೆ.
ಇಲ್ಲಿನ ಜನರ ಆದಾಯ ಹೆಚ್ಚಿರುವುದರಿಂದ ಕೊಳ್ಳುವ ಶಕ್ತಿ ಅತ್ಯಂತ ಬಲಿಷ್ಠವಾಗಿದೆ.ಅತ್ಯಂತ ಕಟ್ಟುನಿಟ್ಟಿನ ಕಾನೂನು ವ್ಯವಸ್ಥೆ ಇರುವುದರಿಂದ ಇಲ್ಲಿನ ನಿವಾಸಿಗಳಿಗೆ ಹೆಚ್ಚಿನ ಸುರಕ್ಷತೆ ಸಿಗುತ್ತಿದೆ.ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಕತಾರ್ 182.7 ಸ್ಕೋರ್ನೊಂದಿಗೆ ಏಷ್ಯಾದಲ್ಲಿ ಮೂರನೇ ಸ್ಥಾನದಲ್ಲಿದೆ.
4.ಯುನೈಟೆಡ್ ಅರಬ್ ಎಮಿರೇಟ್ಸ್:ಉತ್ತಮ ಜೀವನಮಟ್ಟವನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಯುಎಇ ಪ್ರಮುಖ ಸ್ಥಾನದಲ್ಲಿದೆ. ಆಧುನಿಕ ಮೂಲಸೌಕರ್ಯ ಮತ್ತು ಐಷಾರಾಮಿ ಜೀವನಕ್ಕೆ ಈ ದೇಶ ಪ್ರಸಿದ್ಧ.ಅಬುಧಾಬಿ ಮತ್ತು ದುಬೈನಂತಹ ನಗರಗಳು ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿದ್ದು, ಪ್ರವಾಸಿಗರನ್ನು ಮತ್ತು ನಿವಾಸಿಗಳನ್ನು ಆಕರ್ಷಿಸುತ್ತಿವೆ.ಇಲ್ಲಿನ ಜೀವನ ವೆಚ್ಚ ಮತ್ತು ಆಸ್ತಿಗಳ ಬೆಲೆ (Real Estate) ಅತೀ ಹೆಚ್ಚಾಗಿರುವುದು ಸಾಮಾನ್ಯ ಜನರಿಗೆ ಸ್ವಲ್ಪ ಸವಾಲಿನ ಸಂಗತಿ.ಯುಎಇ 175.5 ಜೀವನಮಟ್ಟದ ಸೂಚ್ಯಂಕದೊಂದಿಗೆ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ.
5.ಇಸ್ರೇಲ್: ಜೀವನಮಟ್ಟದ ಸೂಚ್ಯಂಕದಲ್ಲಿ 167.7 ಸ್ಕೋರ್ ಪಡೆಯುವ ಮೂಲಕ ಇಸ್ರೇಲ್ ಐದನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.ಇಲ್ಲಿನ ಆಹ್ಲಾದಕರ ಹವಾಮಾನ ಮತ್ತು ಅತ್ಯುತ್ತಮ ಆರೋಗ್ಯ ಸೇವೆಗಳು ಜನರ ನೆಮ್ಮದಿಯ ಬದುಕಿಗೆ ಸಾಕ್ಷಿಯಾಗಿವೆ.ಇಲ್ಲಿನ ವಿಪರೀತ ಜೀವನ ವೆಚ್ಚ ಮತ್ತು ಆಸ್ತಿಗಳ ಬೆಲೆ ಸಾಮಾನ್ಯ ಜನರ ಆದಾಯಕ್ಕೆ ಸವಾಲಾಗಿ ಪರಿಣಮಿಸಿದೆ.
ಭಾರತದ ವೈದ್ಯಕೀಯ ಸೇವೆಗಳು ಜಾಗತಿಕವಾಗಿ ಗಮನ ಸೆಳೆದಿವೆ. ವಿಶೇಷವಾಗಿ ಚಿಕಿತ್ಸೆಯ ಲಭ್ಯತೆ ಮತ್ತು ಕೈಗೆಟುಕುವ ದರದಲ್ಲಿ (Affordability) ಭಾರತವು 14ನೇ ಸ್ಥಾನ ಪಡೆದು ಮಿಂಚುತ್ತಿದೆ.
ಜೀವನದ ಗುಣಮಟ್ಟದಲ್ಲಿ ಸವಾಲು (52ನೇ ಸ್ಥಾನ): ವೈದ್ಯಕೀಯ ಸೌಲಭ್ಯಗಳು ಉತ್ತಮವಾಗಿದ್ದರೂ, ಒಟ್ಟಾರೆ ಜೀವನದ ಗುಣಮಟ್ಟದ ಸೂಚ್ಯಂಕದಲ್ಲಿ ಭಾರತ 52ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಗಾಳಿಯ ಗುಣಮಟ್ಟ (53ನೇ ಸ್ಥಾನ): ನಮ್ಮ ಪರಿಸರ ಮತ್ತು ವಾಯು ಮಾಲಿನ್ಯದ ಮಟ್ಟ ಕಳವಳಕಾರಿಯಾಗಿದೆ. ಗಾಳಿಯ ಗುಣಮಟ್ಟದಲ್ಲಿ ಭಾರತ 53ನೇ ಸ್ಥಾನದಲ್ಲಿದ್ದು, ಸುಧಾರಣೆಯ ಅಗತ್ಯವಿದೆ ಎಂದು ವರದಿ ತಿಳಿಸಿದೆ.

