ಬೆಂಗಳೂರು: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲಿನ ನಿಯಂತ್ರಣ ಕ್ರಮವು ಕಂಪನಿಯ ಹಣಕಾಸು ವ್ಯವಹಾರ ಮತ್ತು ಕಾರ್ಯಾಚರಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಂಪನಿಯ ಎಲ್ಲಾ ಸೇವೆಗಳು ಯಾವುದೇ ಅಡೆ-ತಡೆ ಇಲ್ಲದೆ ಲಭ್ಯವಾಗುತ್ತಿವೆ ಎಂದು ಪೇಟಿಎಂ ತಿಳಿಸಿದೆ.
ಪೇಟಿಎಂ ಯಾವುದೇ ಅಡೆತಡೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ಅದರ ಸೇವೆಗಳು ಮುಂದೆಯೂ ನಿರಂತರವಾಗಿ ಲಭ್ಯವಾಗಲಿದೆ.
ಪೇಟಿಎಂ ಆ್ಯಪ್, ಪೇಟಿಎಂ ಯುಪಿಐ, ಪೇಟಿಎಂ ಗೋಲ್ಡ್ ಮತ್ತು ಪೇಟಿಎಂ ಕ್ಯೂಆರ್, ಪೇಟಿಎಂ ಸೌಂಡ್ ಬಾಕ್ಸ್, ಪೇಟಿಎಂ ಕಾರ್ಡ್ ಮಷಿನ್, ಪೇಟಿಎಂ ಟ್ರಾವೆಲ್, ಪೇಟಿಎಂ ಪೇಮೆಂಟ್ ಸೇರಿದಂತೆ ಅದರ ಅಂಗಸಂಸ್ಥೆಗಳು ಅಸೋಸಿಯೇಟೆಡ್ ಕಂಪನಿಗಳು ನೀಡುವ ಎಲ್ಲಾ ಸೇವೆಗಳು ಎಂದಿನಂತೆ ಲಭ್ಯವಾಗುತ್ತಿವೆ ಎಂದು ಹೇಳಲಾಗಿದೆ.

