ಮೊದಲ ಬಾರಿ ಡೇಟಿಂಗ್ ಹೋಗುತ್ತಿದ್ದೀರಾ, ನಿಮ್ಮ ಜೊತೆಗಾರ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಹಂತದಲ್ಲಿದ್ದೀರಾ. ಅವರು ಕೂಡಾ ನಿಮ್ಮಷ್ಟೇ ಎಚ್ಚರದಿಂದ ಪ್ರತಿಯೊಂದು ಸಂಗತಿಗಳನ್ನೂ ಗಮನಿಸುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಹಾಗಾಗಿ ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಲು ಮರೆಯದಿರಿ.
ಸಮಯಕ್ಕೆ ಸರಿಯಾಗಿ ನಿಗದಿಪಡಿಸಿದ ಸ್ಥಳದಲ್ಲಿರಿ. ನೀವು ಸಮಯಕ್ಕೆ ಬೆಲೆ ನೀಡಿದರೆ ನಿಮ್ಮನ್ನು ಭೇಟಿಯಾಗಲು ಬಂದ ವ್ಯಕ್ತಿ ನಿಮಗೆ ಗೌರವ ನೀಡುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ. ನೀವು ತಲುಪುವುದು ಸಕಾರಣವಾಗಿ ತಡವಾದರೆ ಅವರಿಗೆ ಕರೆ ಮಾಡಿ ತಿಳಿಸಲು ಮರೆಯದಿರಿ.