ಶಂಕರ್ ನಿರ್ದೇಶನದ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅಭಿನಯದ ‘ಗೇಮ್ ಚೇಂಜರ್’ ಚಿತ್ರದ ಟ್ರೈಲರ್ ನಿನ್ನೆ ಯಷ್ಟೇ ಬಿಡುಗಡೆಯಾಗಿ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ್ದು, ನೋಡುಗರರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ನಾಳೆ ಈ ಚಿತ್ರದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮವಿದ್ದು, ಪವರ್ ಸ್ಟಾರ್ ಪವನ್ ಕಲ್ಯಾಣ್ ಅತಿಥಿಯಾಗಿ ಆಗಮಿಸಲಿದ್ದಾರೆ.
ಈ ಚಿತ್ರವನ್ನು ರಾಜು, ಶಿರೀಶ್, ನಿರ್ಮಾಣ ಮಾಡಿದ್ದು, ರಾಮ್ ಚರಣ್ ಸೇರಿದಂತೆ ಎಸ್.ಜೆ.ಸೂರ್ಯ, ಶ್ರೀಕಾಂತ್, ಸುನಿಲ್, ಜಯರಾಮ್, ನವೀನ್ ಚಂದ್ರು, ವೆನ್ನಲ ಕಿಶೋರ್, ವಿಜಯ ಕೃಷ್ಣ ನರೇಶ್, ಬ್ರಹ್ಮಾನಂದಂ, ರಾಜೀವ್ ಕಣಕಾಲ, ರಘು ಬಾಬು, ಪ್ರಿಯದರ್ಶಿ ಪುಳಿಕೊಂಡ, ಸತ್ಯ ಅಕ್ಕಳ, ವೆಂಕಟೇಶ್ ಕಾಕುಮಾನು, ಚೈತನ್ಯ ಕೃಷ್ಣ, ವೈವಾ ಹರ್ಷ, ಸುದರ್ಶನ್, ಪೃಧ್ವಿ ರಾಜ್, ರಾಕೆಟ್ ರಾಘವ, ಬಣ್ಣ ಹಚ್ಚಿದ್ದಾರೆ. ಥಮನ್ ಎಸ್ ಸಂಗೀತ ಸಂಯೋಜನೆ ನೀಡಿದ್ದು, ಸಾಯಿ ಮಾಧವ್ ಬುರ್ರಾ ಸಂಭಾಷಣೆ, ಅವಿನಾಶ್ ಕಲಾ ನಿರ್ದೇಶನ, ಎಸ್ ತಿರುನಾವುಕ್ಕರಸು ಛಾಯಾಗ್ರಹಣ, ಅಂಬರೀವ್ ಸಾಹಸ ನಿರ್ದೇಶನ, ಗಣೇಶ್ ನೃತ್ಯ ನಿರ್ದೇಶನವಿದೆ.