1999 ಜುಲೈ 15 ರಂದು ತೆರೆ ಕಂಡಿದ್ದ ಪವನ್ ಕಲ್ಯಾಣ್ ಅಭಿನಯದ ‘ತಮ್ಮುಡು’ ಚಿತ್ರ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿತ್ತು. ಮುಂದಿನ ತಿಂಗಳಿಗೆ ಈ ಸಿನಿಮಾ ಬಿಡುಗಡೆಯಾಗಿ 25 ವರ್ಷಗಳಾಗಲಿವೆ. ಚಿತ್ರತಂಡ ಇಂದು ಮರು ಬಿಡುಗಡೆ ಮಾಡುತ್ತಿದ್ದು, ಪವನ್ ಕಲ್ಯಾಣ್ ಅಭಿಮಾನಿಗಳು ಮತ್ತೊಮ್ಮೆ ಸಂಭ್ರಮಿಸಲು ಸಜ್ಜಾಗಿದ್ದಾರೆ.
ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಗೆ ಜೋಡಿ ಆಗಿ ಪ್ರೀತಿ ಜಾಂಗಿಯಾನಿ ಅಭಿನಯಿಸಿದ್ದು, ಅದಿತಿ ಗೋವಿತ್ರಿಕರ್, ಭೂಪಿಂದರ್ ಸಿಂಗ್, ಅಚ್ಯುತ್, ಬ್ರಹ್ಮಾನಂದಂ, ಕಿಟ್ಟಿ, ಚಂದ್ರ ಮೋಹನ್, ವೇಣು ಮಾಧವ್, ವರ್ಷಾ ಉಳಿದ ಪಾತ್ರವರ್ಗದಲ್ಲಿದ್ದಾರೆ. ಶ್ರೀ ವೆಂಕಟೇಶ್ವರ ಆರ್ಟ್ ಫಿಲಂಸ್ ಬ್ಯಾನರ್ ನಲ್ಲಿ ಬುರುಗುಪಲ್ಲಿ ಶಿವರಾಮಕೃಷ್ಣ ನಿರ್ಮಾಣ ಮಾಡಿದ್ದಾರೆ. ಮಾರ್ತಾಡ್ ಕೆ ವೆಂಕಟೇಶ್ ಅವರ ಸಂಕಲನವಿದ್ದು, ರಾಮನ ಗೋಗುಲ ಸಂಗೀತ ಸಂಯೋಜನೆ ನೀಡಿದ್ದಾರೆ.
https://twitter.com/telugufilmnagar/status/1801791275437592886